ಸಣ್ಣ ಈರುಳ್ಳಿ ಬಿತ್ತನೆಯತ್ತ ರೈತರ ಚಿತ್ತ

28-GPT-3
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಸಣ್ಣ ಈರುಳ್ಳಿ ಬಿತ್ತನೆ ಖರೀದಿಗೆ ರೈತರು ಮುಂದಾಗಿದ್ದಾರೆ.
Published on

ಗುಂಡ್ಲುಪೇಟೆ: ಈ ಬಾರಿ ಸಾಕಷ್ಟು ಮಳೆ ಬಿದ್ದಿರುವ ಪರಿಣಾಮ ಹೆಚ್ಚಿನ ರೈತರು ಸಣ್ಣ ಈರುಳ್ಳಿ ಬಿತ್ತನೆಗೆ ಮುಂದಾಗಿದ್ದರಿಂದ ಸಂತೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.

ಈ ಬಾರಿ ಉತ್ತಮ ಮಳೆ ಬಿದ್ದು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿರುವುದು ಹೆಚ್ಚಿನ ರೈತರು ಸಣ್ಣ ಈರುಳ್ಳಿ ಬಿತ್ತನೆ ಮಾಡಲು ಪ್ರೇರೇಪಿಸುತ್ತಿದೆ. ಆದರೂ ಬಹುತೇಕ ರೈತರು ಸಣ್ಣ ಈರುಳ್ಳಿ ಬೆಳೆ ಬಿತ್ತನೆಗೆ ಮುಂದಾಗಿದ್ದಾರೆ.

ಪ್ರತಿ ಗುರುವಾರ ನಡೆಯುವ ತೆರಕಣಾಂಬಿ ಸಂತೆಗೆ ತಮಿಳುನಾಡಿನ ಈರೋಡಿನಿಂದ 25 ರಿಂದ 30 ಲಾರಿಗಳಲ್ಲಿ ಬಿತ್ತನೆ ಈರುಳ್ಳಿ ಬರುತ್ತಿದೆ. ಮುಂಜಾನೆ ಬೇಗನೆ ಸಂತೆಗೆ ಆಗಮಿಸುವ ರೈತರು ಈರುಳ್ಳಿ ಖರೀದಿಗೆ ಮುಗಿಬೀಳುವುದರಿಂದ ದರ ನಿಗದಿಯಾದ ಕೆಲವೇ ಗಂಟೆಗಳಲ್ಲಿ ಎಲ್ಲವೂ ಮಾರಾಟವಾಗುತ್ತಿವೆ. ಕಳೆದ ವಾರದ ಸಂತೆಯಲ್ಲಿ 50 ಕೆಜಿ ತೂಕದ ಸಣ್ಣ ಈರುಳ್ಳಿ ಬಿತ್ತನೆ 2 ಸಾವಿರ ರೂ.ಗೆ ಬಿಕರಿಯಾಗಿತ್ತು. ಈ ವಾರ ಹೆಚ್ಚಿನ ರೈತರು ಖರೀದಿಸಿದ್ದರಿಂದ 3 ಸಾವಿರ ರೂ.ನಿಂದ 200 ರೂ.ವರೆಗೂ ಮಾರಾಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net