ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ

Farmers' hourly sit-in satyagraha ends
ಬಸವನಬಾಗೇವಾಡಿಯಲ್ಲಿ ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ವಿಜಯಪುರ ಕಂದಾಯ ಉಪವಿಭಾಗಾಧಿಕಾರಿ ಬಸಗೊಂಡಪ್ಪ ಕಲಶೆಟ್ಟಿ ಭೇಟಿ ನೀಡಿದರು. ಅಧಿಕಾರಿಗಳಾದ ಯಮನಪ್ಪ ಸೋಮನಕಟ್ಟಿ, ಜಿ.ಎಸ್​. ನಾಯಕ, ರೈತರಾದ ಮಾದಪ್ಪ ಹೊರ್ತಿ, ಶ್ರೀಶೈಲ ಕೋಲಕಾರ, ಬಸಪ್ಪ ಮುಳವಾಳ ಇತರರಿದ್ದರು.
Published on

ಬಸವನಬಾಗೇವಾಡಿ: ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಸರಿಪಡಿಸುವಂತೆ ಪಟ್ಟಣದ ತಹಸೀಲ್ದಾರ್​ ಕಚೇರಿ ಮುಂದೆ ಅಖಂಡ ಕರ್ನಾಟಕ ರೈತ ಸಂ ಹಾಗೂ ತಾಲೂಕಿನ ವಿವಿಧ ಗ್ರಾಮದ ರೈತರು ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಸಂಜೆ ಅಂತ್ಯವಾಯಿತು.

ಧರಣಿ ಸತ್ಯಾಗ್ರಹ ಸ್ಥಳಕ್ಕೆ ವಿಜಯಪುರ ಕಂದಾಯ ಉಪವಿಭಾಗಾಧಿಕಾರಿ ಬಸಗೊಂಡಪ್ಪ ಕಲಶೆಟ್ಟಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಸರಿಪಡಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಯಿತು.

ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಇದೆ.

ಹಲವಾರು ಬಾರಿ ಹೋರಾಟ ಮಾಡಿದ ಲದಿಂದ ರಾಜ್ಯ ಸರ್ಕಾರ ದಾರಿ ಸಮಸ್ಯೆ ನಿವಾರಿಸಲು ಸುತ್ತೋಲೆಯನ್ನು ಆಯಾ ತಹಸೀಲ್ದಾರ್​ಗೆ ನೀಡಿದ್ದರೂ ಅಧಿಕಾರಿಗಳ ರ್ನಿಲಕ್ಷದಿಂದ ರೈತರ ದಾರಿ ಸಮಸ್ಯೆ ಪರಿಹಾರವಾಗುತ್ತಿಲ್ಲ. ಸಮಸ್ಯೆ ಸರಿಪಡಿಸಲು ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಿ ಸುಘ್ರೀವಾಜ್ಞೆ ಹೊರಡಿಸಬೇಕು ಎಂದರು.

ತಹಸೀಲ್ದಾರ್​ ಯಮನಪ್ಪ ಸೋಮನಕಟ್ಟಿ, ಗ್ರೇಡ್​&2 ತಹಸೀಲ್ದಾರ್​ ಜಿ.ಎಸ್​. ನಾಯಕ, ಕಂದಾಯ ನಿರೀಕ ಸಂತೋಷ ದೇಸಾಯಿ, ಗ್ರಾಮಾಡಳಿತ ಅಧಿಕಾರಿ ಸಂತೋಷ ಕುಂಟೊಜಿ, ರೈತರಾದ ಮಾದಪ್ಪ ಹೊರ್ತಿ, ಶ್ರೀಶೈಲ ಕೋಲಕಾರ, ಬಸಪ್ಪ ಮುಳವಾಳ, ಶರಣಗೌಡ ಪಾಟೀಲ, ಮೈಬೂಬ ಅವಟಿ, ಪ್ರಕಾಶ ಬಿರಾದಾರ, ವಿಠ್ಠಲ ಬಿರಾದಾರ, ಈರಣ್ಣ ದೇವರಗುಡಿ, ಚಂದ್ರಶೇಖರ ಜಮ್ಮಲದಿನ್ನಿ, ಹಿರಗಪ್ಪ ಗಂಗೂರ, ಶೇಖಪ್ಪ ಸಜ್ಜನ, ರಾಜೇಸಾ ವಾಲೀಕಾರ, ರೇವಪ್ಪಗೌಡ ಪೊಲೇಸಿ, ಧರ್ಮಣ್ಣ ಬೂದಗೋಳ, ಶಿವಪ್ಪ ಮಂಗೋಂಡ, ರಾಜು ವಂದಾಲ, ಜಗದೀಶ ನಿಂಗದಳ್ಳಿ, ಮಹಾದೇವಪ್ಪ ಮುತ್ತತ್ತಿ, ಬಸನಗೌಡ ಬಿರಾದಾರ, ಲಲಿತಾ ಕುರಣದ, ನಾಗಮ್ಮ ಕುರಣದ, ಭೀಮರಾಯ ದಳವಾಯಿ, ಶಾಂತವ್ವ ಬಾಲಗೋಳ, ಮಹೇಶ ಪತ್ತಾರ, ಕಲ್ಲಪ್ಪ ಕೋಲಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net