ರೈತರ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ

24Kagavad1
Published on

ಕಾಗವಾಡ: ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ವರ್ಷದಲ್ಲಿ 10.5 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.5 ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸ್ವಪ್ನಿಲ(ಕಾಕಾ) ಪಾಟೀಲ ಹೇಳಿದರು.

ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 106ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ರೈತರು ಮತ್ತು ಸಂಘದ ಸದಸ್ಯರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪೂಜಾರಿ ಮಾತನಾಡಿ, ಸಂಘ 2,047 ಸದಸ್ಯರು, 1.25 ಕೋಟಿ ರೂ. ಷೇರು ಬಂಡವಾಳ ಮತ್ತು 12.97 ಕೋಟಿ ರೂ. ದುಡಿಯುವ ಬಂಡವಾಳ, 3.07 ಕೋಟಿ ರೂ. ಠೇವಣಿ ಹೊಂದಿದ್ದು, 9.36 ಕೋಟಿ ರೂ. ಸಾಲ ವಿತರಿಸಿದೆ ಎಂದರು.

ಸಭೆಯಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಬಿ.ಜೆ.ಪಾಟೀಲ, ಅಣ್ಣಾಸಾಹೇಬ ಕಠಾರೆ, ಬಾಳಗೌಡ ಪಾಟೀಲ, ಮಾಮಾಸಾಹೇಬ ಗಡೆನ್ನವರ, ಸೌರಭ ಪಾಟೀಲ, ಉಪಾಧ್ಯಕ್ಷ ಪದ್ಮಾಕರ ಕರವ, ನಿರ್ದೇಶಕರಾದ ಬಸಗೌಡ ಪಾಟೀಲ, ಶಾಂತಿನಾಥ ಮಾಲಗಾಂವೆ, ರಾವಸಾಹೇಬ ಚೌಗುಲಾ, ಅಪ್ಪಾಸಾಹೇಬ ಗುಮಟೆ, ಸುವರ್ಣಾ ಪಾಟೀಲ, ರೂಪಾಲಿ ಪವಾರ, ಅನಿಲ ಭಜಂತ್ರಿ, ಲಕ್ಕಪ್ಪ ಕೋಳಿ, ಖಾಜಾಸಾಬ್ ಮುಲ್ಲಾ, ಭಾರತಿ ಚೌಗುಲೆ, ಪದ್ಮಾಕರ ಕರವ, ಬಸವರಾಜ ಕೋರೆ, ಪವನ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net