

ಚಿಕ್ಕಮಗಳೂರು: ರೈತರಿಗೆ ಯಾವುದೇ ಜಾತಿಯು ಇಲ್ಲ ಹಾಗೆ ಪಕ್ಷವು ಇಲ್ಲ. ರೈತರೇ ಒಂದು ಜಾತಿ ಹಾಗೂ ಪಕ್ಷ. ದೇಶದಲ್ಲಿ ಶೇ. ೭೦ರಷ್ಟಿರುವ ರೈತರು ಸಮೃದ್ಧಿಯಾಗಿರಬೇಕು. ಮಳೆ ಬಂದು ಉತ್ತಮ ಬೆಳೆ ಜೊತೆಗೆ ಬೆಳೆಗೆ ಉತ್ತಮ ಬೆಲೆಯು ಸಿಕ್ಕಾಗ ರೈತ ಸರ್ಕಾರದ ಯಾವುದೇ ಯೋಜನೆಗಳನ್ನು ಕೇಳುವುದಿಲ್ಲ. ಈ ಬಾರಿ ಮನುಷ್ಯ ಪ್ರಯತ್ನ ಮತ್ತು ದೈವ ಪ್ರಯತ್ನದಿಂದ ಕ್ಷೇತ್ರದ ಬರಗಾಲಪೀಡಿತ ಹೋಬಳಿಗಳಾದ ಲಕ್ಯಾ ಹಾಗೂ ಸಖರಾಯಪಟ್ಟಣ ಭಾಗದ ಕೆರೆಗಳು ಭರ್ತಿಯಾಗಿವೆ ಎಂದು ಶಾಸಕ ಎಚ್ ಡಿ ತಮ್ಮಯ್ಯ ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ದೇವನೂರು ಗ್ರಾಮದ ಕೆರೆ ಎರಡು ವರ್ಷಗಳ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಮನುಷ್ಯ ಪ್ರಯತ್ನಕ್ಕಿಂತ ದೈವ ಪ್ರಯತ್ನವೇ ಮುಖ್ಯ. ದೈವದ ಆಶೀರ್ವಾದ ಇದ್ದಾಗ ಮಾತ್ರ ಮಳೆ ಬಂದು ಈ ಭಾಗದ ಕೆರೆಗಳು ತುಂಬಿದ್ದವು. ದೇವನೂರು ಕೆರೆ ೨೦೧೦, ೨೦೧೧ ಹಾಗೂ ೨೦೨೨ ರಲ್ಲಿ ಮಾತ್ರ ಭರ್ತಿಯಾಗಿತ್ತು. ಈ ಬಾರಿ ಕೆರೆ ತುಂಬಿದ್ದರಿAದ ರೈತರ ಮುಖದಲ್ಲಿ ಸಂತಸ ಕಾಣುತ್ತಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೀಗ ಅವರೇ ಮತ್ತೆ ಸಿಎಂ ಆದ ವೇಳೆ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ಹಳೆಬೀಡು, ಬೆಳವಾಡಿ ಹಾಗೂ ದೇವನೂರು ಕೆರೆಗಳು ಬರ್ತಿಯಾಗಿವೆ ಎಂದು ತಿಳಿಸಿದರು.
ಭದ್ರ ಉಪಕಣಿವೆ ಯೋಜನೆ ಹಾಗೂ ರಣಘಟ್ಟ ಯೋಜನೆಗಳು ಜಾರಿಯಾದರೆ ಕ್ಷೇತ್ರದ ೬೧ ಕೆರೆಗಳು ಬರ್ತಿಯಾಗಲಿವೆ. ಇನ್ನೂ ಒಂದೆರಡು ವರ್ಷಗಳ ಒಳಗಾಗಿ ಈ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಗವಂತನ ಕೃಪೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲ್ಲಾಡುವುದಿಲ್ಲ. ಈ ಬಾರಿ ದೇವರ ಕೃಪೆಯಿಂದ ರಾಜ್ಯಾದ್ಯಂತ ಕೆರೆಕಟ್ಟೆಗಳು ಬರ್ತಿಯಾಗಿವೆ. ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸುವ ಉz್ದೆÃಶದಿಂದ ಮೂರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
೧೨೮೧ ಕೋಟಿ ರೂಪಾಯಿ ವೆಚ್ಚದಲ್ಲಿ ಭದ್ರ ಉಪಕಣಿವೆ ಯೋಜನೆ, ರಣಘಟ್ಟ ಯೋಜನೆ ಹಾಗೂ ಕರಗಡ ಏತ ನೀರಾವರಿ ಯೋಜನೆಯಿಂದ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.
ಜನರು ಮುಖದಲ್ಲಿ ಕೆರೆ ತುಂಬಿದಾಗ ಕಾಣುವ ಹರ್ಷ ಕೋಟಿ ರೂಪಾಯಿ ಕೊಟ್ಟರು ಸಿಗುವುದಿಲ್ಲ. ಭೂಮಿ ಇಮತಾಯಿಯನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಯಾವುದೇ ಶುಭ ಕಾರ್ಯ ಮಾಡುವಾಗಲೂ ಭೂಮಿಯನ್ನು ಪೂಜೆ ಮಾಡುತ್ತೇವೆ. ಈ ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ. ಜೊತೆಗೆ ಯಾವುದೇ ಶುಭ ಕಾರ್ಯದ ವೇಳೆಯೂ ಗಂಗೆಯನ್ನು ತರುತ್ತೇವೆ. ಹೀಗಾಗಿಯೇ ಕೆರೆಗಳು ತುಂಬಿದಾಗ ಬಾಗಿನವನ್ನು ಬಿಟ್ಟು ಬದುಕಿನಲ್ಲಿ ನಿನ್ನಿಂದಲೇ ಎಲ್ಲವೂ ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಟ್ಟ ತಾಯಿ ನೀನು ಎಂದು ಕೃತಜ್ಞತೆಯಿಂದ ಸ್ಮರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಹರೀಶ್, ಮಹಡಿಮನೆ ಸತೀಶ್, ಜಿಪಂ ಮಾಜಿ ಉಪಾಧ್ಯಕ್ಷ ಗುಣಸಾಗರ, ಪ್ರಮುಖರಾದ ವಿಜಯಕುಮಾರ್, ಹೇಮಾವತಿ, ನಟರಾಜ್, ಅಶೋಕ, ದೀಪಾ ದಕ್ಷಿಣ ಮೂರ್ತಿ ಮತ್ತಿತರರಿದ್ದರು.