ರೈತರಿಗೆ ಸಂತೋಷದ ವಾತಾವರಣ ನಿರ್ಮಿಸಿ

26 Aigali 1-Web
ಐಗಳಿಯಲ್ಲಿ ಹಮ್ಮಿಕೊಂಡ್ದಿದ್ದ ಹೆಚ್ಚುವರಿ ಒಣ ದ್ರಾಕ್ಷಿ ಸಂಸ್ಕರಣಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಸಿದ್ಧೇಶ್ವರ ಶ್ರೀಗಳು ಮಾತನಾಡಿದರು. ಗುರುಪಾದ ಶ್ರೀ, ಅಮರೇಶ್ವರ ಮಹಾರಾಜರು, ಶಾಸಕ ಮಹೇಶ ಕುಮಠಳ್ಳಿ, ಗಜಾನನ ಮಂಗಸೂಳಿ ಇದ್ದರು.
Published on

ಐಗಳಿ: ದೇಶ ನಿಂತಿರುವುದು ಅನ್ನದಾತರ ಮೇಲೆ. ರೈತ ಸಂತೋಷದಿಂದ ಇರಬೇಕು. ರೈತರ ಸಂತೋಷಕ್ಕೆ ಬೇಕಾದ ಅಗತ್ಯ, ಸಕಾರಾತ್ಮಕ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇೀಶ್ವರ ಸ್ವಾಮೀಜಿ ಹೇಳಿದ್ದಾರೆ. ಬುಧವಾರ ಗ್ರಾಮದ ಅಥಣಿ ರೇಸಿನ್ ಪ್ರೊಸೆಸಿಂಗ್ ಕ್ಲಸ್ಟರ್‌ನಲ್ಲಿ ಹೆಚ್ಚುವರಿ ಒಣ ದ್ರಾಕ್ಷಿ ಸಂಸ್ಕರಣೆ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಥಣಿ ರೇಸಿನ್ ಪ್ರೊಸೆಸಿಂಗ್ ಕ್ಲಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಶಹಜಹಾನ್ ಡೊಂಗರಗಾಂವ ಮಾತನಾಡಿ, ಸರ್ಕಾರ ದ್ರಾಕ್ಷಿ ಬೆಳೆಗಾರರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಗುರುಪಾದ ಸ್ವಾಮೀಜಿ, ಅಮರೇಶ್ವರ ಮಹಾರಾಜರು, ಬಾಬುರಾವ ಮಹಾರಾಜರು, ಶಾಸಕ ಮಹೇಶ ಕುಮಠಳ್ಳಿ, ಗಜಾನನ ಮಂಗಸೂಳಿ, ನೂರಹ್ಮದ ಡೊಂಗರಗಾಂವ, ಎಂ.ಎಲ್. ಹಾಲಳ್ಳಿ, ದಸ್ತಗೀರ ಕೊರಬು, ಬಂದೇನಮಾಜ ಮುಜಾವರ, ಮೈನುದ್ದೀನ ಡೊಂಗರಗಾವ, ಎಸ್.ಎಂ. ನಾಯಿಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net