

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೇನು ನೊಣಗಳ ದಿನಾಚರಣೆ ಆಯೋಜಿಸಿಲಾಗಿತ್ತು.
ಕೇಂದ್ರದ ಹಿರಿಯ ವಿಜ್ಞಾನಿಯೂ ಆದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಜೇನು ಕೃಷಿಯು ದಿನಾಚರಣೆಗೆ ಸೀಮಿತವಾಗದೆ, ರೈತರು ಜೇನುಕೃಷಿ ಅಳವಡಿಸಿಕೊಂಡು ಸದುಪಯೋಗ ಪಡಿಸಿಕೊಂಡು ಉದ್ದಿಮೆದಾರರಾಗಬೇಕು ಎಂದರು. ಜೇನು ಕೃಷಿ ವಿಜ್ಞಾನಿ ಡಾ.ಜಿ.ಈಶ್ವರಪ್ಪ ಮಾತನಾಡಿ, ಜೇನುನೊಣಗಳು ಉತ್ತಮ ಪರಾಗ ಸ್ಪರ್ಶ ಕೀಟಗಳಾಗಿದ್ದು, ಅನೇಕ ಆಹಾರ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತವೆ. ಜೇನು ಕುಟುಂಬಗಳನ್ನು ಕೀಟನಾಶಕ ಹಾಗೂ ರಾಸಾಯನಿಕ ವಸ್ತುಗಳಿಂದ ರಕ್ಷಣೆ ಮಾಡಿ ಸಂತತಿ ಹೆಚ್ಚಿಸುವಂತೆ ಕರೆ ನೀಡಿದರು. ಲಕ್ಷಿ$್ಮದೇವಿಪುರದ ಪ್ರಗತಿಪರ ಜೇನು ಕೃಷಿಕ ಕೆಂಪೇಗೌಡ ಅವರನ್ನು ಸನ್ಮಾನಿಸಲಾಯಿತು.