ಫಸಲ್​ ಬಿಮಾಗೆ ರೈತರ ನಿರಾಸಕ್ತಿ!

17 web
Published on

ಜಿಲ್ಲೆಯಲ್ಲಿ 1.21 ಲಕ್ಷ ನೋಂದಣಿ, 448 ಮಂದಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಸೋರಲಮಾವು ಶ್ರೀಹರ್ಷ ತುಮಕೂರು
ಕರ್ನಾಟಕ ರೈತ ಸುರಾ ಪ್ರಧಾನಮಂತ್ರಿ ಸಲ್​ ಬಿಮಾ(ವಿಮಾ) ಯೋಜನೆಗೆ ಜಿಲ್ಲೆಯ ರೈತರು ನಿರಾಸಕ್ತಿ ತೋರುತ್ತಿದ್ದು, ಬೆಳೆ ವಿಮೆ ಪರಿಹಾರ ವಿತರಣೆ ಬಗ್ಗೆ ರೈತರಿಗೆ ಸ್ಪಷ್ಟತೆ ಇಲ್ಲದ ಕಾರಣ ಕಂತು ಪಾವತಿಸಲು ಮೀನಮೇಷ ಎಣಿಸುತ್ತಿದ್ದು, ಯೋಜನೆ ನಿರೀತ ಯಶಸ್ಸುಗಳಿಸಲು ವಿಲವಾಗಿದೆ.
ಜಿಲ್ಲೆಯಲ್ಲಿ 5.15 ಲಕ್ಷ ರೈತರು ಒಕ್ಕಲುತನ ನಂಬಿದ್ದು, ಈ ಪೈಕಿ 2024&25ನೇ ಸಾಲಿನಲ್ಲಿ ಕೇವಲ 1.21 ಲಕ್ಷ ರೈತರು ವಿಮಾ ಯೋಜನೆಗೆ ಪ್ರಸ್ತಾವನೆಗೆ ನೋಂದಣಿ ಮಾಡಿಕೊಂಡಿದ್ದು, 3.94 ಲಕ್ಷ ರೈತರು ಯೋಜನೆಗೆ ಕಂತು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. 2023&24ನೇ ಸಾಲಿನಲ್ಲಿ ನೋಂದಣಿಯಾಗಿದ್ದ 74850 ರೈತರಿಗೆ ವಿಮಾ ಪರಿಹಾರ ಮೊತ್ತ 67.78ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, 2019ರಿಂದ 2023ರವರೆಗೂ ಆಧಾರ್​ ವ್ಯಾತ್ಯಾಸ, ರೈತರ ಬ್ಯಾಂಕ್​ ಖಾತೆ ಆಧಾರ್​ ಜೋಡಣೆ ಮತ್ತು ಎನ್​ಪಿಸಿಐ ಮ್ಯಾಪಿಂಗ್​ ಲೋಪದ ಕಾರಣದಿಂದ 448 ರೈತರಿಗೆ ಪಾವತಿಯಾಗಬೇಕಿರುವ 25.78 ಲಕ್ಷ ರೂ. ಬೆಳೆ ವಿಮಾ ಪರಿಹಾರ ಬಾಕಿಯಾಗಿಯೇ ಉಳಿದಿದೆ.


ಬ್ಯಾಂಕ್​ ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಇರುವ 448 ರೈತರನ್ನು ಗುರುತಿಸಿ ಪರಿಹಾರ ತಲುಪಿಸುವ ಕೆಲಸವನ್ನು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ನಾಲ್ಕು ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ. ಆದರೂ, ಅರ್ಹ ರೈತರಿಗೆ ನ್ಯಾಯವಾಗಿ ಸಲ್ಲಬೇಕಿರುವ ಪರಿಹಾರ ಇನ್ನೂ ಸಿಕ್ಕಿಲ್ಲ. ಇಂತಹದ್ದೇ ಸಾಕಷ್ಟು ಕಾರಣಗಳಿಂದ ರೈತರು ವಿಮೆ ಸಹವಾಸಕ್ಕೆ ಕೈಮುಗಿದು ಸುಮ್ಮನಾಗಿದ್ದಾರೆ.


ಕಳೆದ ವರ್ಷ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೋಂದಣಿಯಾಗಿದ್ದ 8,959 ರೈತರಿಗೆ 7.23 ಕೋಟಿ ರೂ., ಗುಬ್ಬಿ ತಾಲೂಕಿನ 2,340 ರೈತರಿಗೆ 1.51 ಕೋಟಿ ರೂ., ಕೊರಟಗೆರೆ ತಾಲೂಕಿನ 6,572 ರೈತರಿಗೆ 11.64 ಕೋಟಿ ರೂ., ಕುಣಿಗಲ್​ ತಾಲೂಕಿನ 631 ರೈತರಿಗೆ 60.56 ಲಕ್ಷ ರೂ., ಮಧುಗಿರಿ ತಾಲೂಕಿನ 8,987 ರೈತರಿಗೆ 13.42 ಕೋಟಿ ರೂ., ಪಾವಗಡ ತಾಲೂಕಿನ 6,744 ರೈತರಿಗೆ 18.39ಕೋಟಿ ರೂ., ಶಿರಾ ತಾಲೂಕಿನ 13,153 ರೈತರಿಗೆ 6.52ಕೋಟಿ ರೂ., ತಿಪಟೂರು ತಾಲೂಕಿನ 17,142 ರೈತರಿಗೆ 3.81ಕೋಟಿ ರೂ., ತುರುವೇಕೆರೆ ತಾಲೂಕಿನ 9,335 ರೈತರಿಗೆ 3.82ಕೋಟಿ ರೂ. ಹಾಗೂ ತುಮಕೂರು ತಾಲೂಕಿನಲ್ಲಿ ನೋಂದಣಿಯಾಗಿದ್ದ 987 ರೈತರಿಗೆ 82 ಲಕ್ಷ ರೂ. ವಿಮೆ ಪರಿಹಾರ ಮೊತ್ತ ಸಿಕ್ಕಿದೆ.
ಈ ವರ್ಷವೂ ಸಹ ವಾಣಿಜ್ಯ ಹಾಗೂ ಸಹಕಾರ ಬ್ಯಾಂಕ್​ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರು ಮಾತ್ರ ಪಿಎಂ ಸಲ್​ ವಿಮಾ ಯೋಜನೆಗೆ ಅನಿವಾರ್ಯವಾಗಿ ನೋಂದಣಿ ಮಾಡಿಸುತ್ತಿದ್ದಾರೆ. ಸಾಲ ಪಡೆಯದ ರೈತರಿಗೆ ಪ್ರಚಾರದ ಕೊರತೆಯಿಂದ ವಿಮಾ ಯೋಜನೆಗೆ ಕಂತು ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ಸೇರಿ ಮಧುಗಿರಿ ಉಪವಿಭಾಗದ ತಾಲೂಕುಗಳಲ್ಲಿ ಹಿಂದಿನಿಂದಲೂ ರೈತರು ವಿಮೆ ಮಾಡಿಸಲು ಆಸಕ್ತಿ ತೋರಿಲ್ಲ. ಅಡಕೆ, ತೆಂಗು ಹೆಚ್ಚಾಗಿರುವ ತಾಲೂಕುಗಳಲ್ಲಿ ವಿಮೆಗೆ ಹೆಚ್ಚು ಪ್ರಚಾರ ನಡೆಸಬೇಕು. ವಿಮೆ ಪರಿಹಾರ ಸಕಾಲದಲ್ಲಿ ದೊರೆಯುವಂತೆ ಮಾಡಿ ರೈತರಲ್ಲಿ ಭರವಸೆ ಮೂಡಿಸಿದರೆ ಸ್ವಯಂ ಪ್ರೇರಿತರಾಗಿಯೇ ವಿಮೆ ಮಾಡಿಸುತ್ತಾರೆ.
ಕೆ.ಎನ್​.ರಾಜಣ್ಣ ಸಹಕಾರ ಸಚಿವ

ಕಳೆದ ವರ್ಷ ರೈತರಿಂದ ನೋಂದಣಿ ಮಾಡಿಕೊಂಡಿದ್ದ ಕೆಲವು ಬ್ಯಾಂಕ್​ಗಳು ಹಣವನ್ನು ವಿಮಾ ಕಂಪನಿಗೆ ಜಮಾಮಾಡದೆ ರೈತರಿಗೆ ಅನ್ಯಾಯ ಮಾಡಿರುವುದು ದೃಢವಾಗಿದೆ. ಇಂತಹ ಬ್ಯಾಂಕ್​ಗಳ ಮೇಲೆ ನಿಗಾವಹಿಸಿ ರೈತರಿಗೆ ಮೋಸವಾಗದಂತೆ ಎಚ್ಚರಿಕೆ ವಹಿಸಲು ಲೀಡ್​ ಬ್ಯಾಂಕ್​ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.
ಶುಭಕಲ್ಯಾಣ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net