ರೈತರ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಳ್ಳಿ

27Huk2-Web
ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಪಿಕೆಪಿಎಸ್ ನಿಂದ ಮಂಜೂರಾದ ಟ್ರ್ಯಾಕ್ಟರ್‌ಗಳನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಮಹಾಲಿಂಗ ಸನದಿ, ಬಸವರಾಜ ಕೊಳವಿ, ತೇಜರಾಜ ಪಾಟೀಲ ಇತರರಿದ್ದರು.
Published on

ಹುಕ್ಕೇರಿ: ನಾಡಿನ ಅಭಿವೃದ್ಧಿಗೆ ರೈತರ ಬೆಳವಣಿಗೆ ಅವಶ್ಯ.ಅದಕ್ಕಾಗಿ ಅವರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಒದಗಿಸುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಪಿಕೆಪಿಎಸ್ ಮೂಲಕ ರೈತರಿಗೆ ಮಂಜೂರಿಯಾದ ಟ್ರ್ಯಾಕ್ಟರ್‌ಗಳನ್ನು ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು. ಮುಚ್ಚುವ ಹಂತದಲ್ಲಿದ್ದ ಇಲ್ಲಿನ ಪಿಕೆಪಿಎಸ್ ಇದೀಗ ಲಾಭ ಗಳಿಸಿ ತನ್ನ ಸ್ವಂತ ಬಂಡವಾಳದಲ್ಲಿ ರೈತರಿಗೆ ಟ್ರ್ಯಾಕ್ಟರ್ ಸಾಲ ನೀಡುವ ಸ್ಥಿತಿಗೆ ತಲುಪಿರುವುದು ಮೆಚ್ಚುಗೆಯ ಸಂಗತಿ ಎಂದರು. ಬರುವ ದಿನಗಳಲ್ಲಿ ಮತ್ತಷ್ಟು ಸಂಘದ ಸದಸ್ಯರಿಗೆ ಇಂತಹ ಸಾಲ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ನಿರ್ದೇಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಚೇರ್ಮನ್ ಮಹಾಲಿಂಗ ಸನದಿ ಮಾತನಾಡಿದರು. ತಾ.ಪಂ ಸದಸ್ಯ ಬಸವರಾಜ ನಾಯಿಕ, ಸಂಘದ ಸದಸ್ಯರಾದ ಕಾಡಪ್ಪ ಬಡಮಲ್ಲನವರ, ಸತ್ತೆಪ್ಪ ಹೆಬ್ಬಾಳಿ ಅವರಿಗೆ ಟ್ರ್ಯಾಕ್ಟರ್ ಕೀ ಅನ್ನು ಹಸ್ತಾಂತರಿಸಿದರು. ವೈಸ್ ಚೇರ್ಮನ್ ಬಸವರಾಜ ಕೊಳವಿ, ತೇಜರಾಜ ಪಾಟೀಲ, ಸಿದ್ದಪ್ಪಾ ನಾಯಿಕ, ಬಸವರಾಜ ಪಾಟೀಲ, ರಾಮಚಂದ್ರ ಘಂಟೆ, ಭೀಮಪ್ಪಾ ಬಂದಾಯಿ, ಶಂಕರ ಹೆಬ್ಬಾಳಿ, ಚಂದ್ರಪ್ಪಾ ಘಸ್ತಿ, ಬಾಳಪ್ಪಾ ಬಡಮಲ್ಲನವರ, ಶ್ರೀಶೈಲ ಮಠಪತಿ, ಡಿಸಿಸಿ ಬ್ಯಾಂಕ್ ಅಸ್ಲಂ ಜಮಖಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net