ರೈತರ ಅಭಿವೃದ್ಧಿಗೆ ಶ್ರಮ

24MNL1
Published on

ಮುನವಳ್ಳಿ: ಪಟ್ಟಣದ ಮುನವಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಕ್ಕೆ ಮುಂಬರುವ ಐದು ವರ್ಷಗಳ ಅವಧಿಗೆ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಸತತ ನಾಲ್ಕನೇ ಅವ-ಧಿಗೆ ಅಧ್ಯರಾಗಿ ಅಂಬರೀಷ ಯಲಿಗಾರ ಹಾಗೂ ಉಪಾಧ್ಯರಾಗಿ ವೀರಭದ್ರಗೌಡ ಪಾಟೀಲ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಎಂ.ಎಸ್​. ಬಸರಿಗಿಡದ ಕಾರ್ಯನಿರ್ವಹಿಸಿದರು. ಅಧ್ಯ ಅಂಬರೀಷ ಯಲಿಗಾರ ಮಾತನಾಡಿ, ಸಹಕಾರ ಸಂಗಳಿಗೆ ರೆತರೇ ಜೀವಾಳವಾಗಿರುವುದರಿಂದ ರೆತರು ಹಾಗೂ ಸಂದ ಶ್ರೇಯೋಭಿವದ್ಧಿಗಾಗಿ ಶ್ರಮಿಸಲಾಗುವುದು ಎಂದರು. ನೂತನ ಅಧ್ಯ, ಉಪಾಧ್ಯ ಹಾಗೂ ಆಡಳಿತ ಮಂಡಳಿಯವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯಿಂದ ವಿಜಯೋತ್ಸವ ಆಚರಿಸಲಾಯಿತು. ರವೀಂದ್ರ ಯಲಿಗಾರ, ಎಂ.ಆರ್​. ಗೋಪಶೆಟ್ಟಿ, ನಾಗಪ್ಪ ಕಾಮಣ್ಣವರ, ಕಲ್ಲಪ್ಪ ಕಿತ್ತೂರ, ಪ್ರಕಾಶ ಕಾಮಣ್ಣವರ, ಶಿವಲಿಂಗಯ್ಯ ಹಿರೇಮಠ, ಆಂದಾನೆಪ್ಪ ಗೋಮಾಡಿ, ಉಮಾ ಬಾಳಿ, ಶೆಲಾ ಗುಂಡ್ಲೂರ, ಯಲ್ಲಪ್ಪ ಬೆರಗುಡ್ಡ, ಮಂಜುನಾಥ ದೊಡಮನಿ, ಮೌಲಾಸಾಬ್​ ಬಂಡ್ರೋಳ್ಳಿ, ಬಿಡಿಸಿಸಿ ಬ್ಯಾಂಕ್​ ನಿರೀಕ ಎಸ್​.ಎಸ್​. ಸಿದ್ದನ್ನವರ, ಸಂದ ಮುಖ್ಯಕಾರ್ಯನಿರ್ವಾಹಕ ಅಶೋಕ ಪಟ್ಟಣಶೆಟ್ಟಿ, ಪಂಚಪ್ಪ ಗುಂಡ್ಲೂರ, ಪ್ರಶಾಂತ ಉಜ್ಜಿನಕೊಪ್ಪ, ಸುರೇಶ ಜಂಬ್ರಿ, ಮಹಾಂತೇಶ ಕಮತಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net