

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಕಂಕೊಳ್ಳಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪಂಪ್ ಸೆಟ್ ಹಾಗೂ ಕೊಳವೆ ಬಾವಿಗಳ ನೋಂದಣಿಗೆ ಆಧಾರ್ ಲಿಂಕ್ ಮಾಡುವುದನ್ನು ಕೈಬಿಡಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಎಂಎಸ್ಪಿಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಬೇಕು.
ಕಳೆದ ವರ್ಷದ ಬರಗಾಲ ಹಿನ್ನಲೆಯಲ್ಲಿ ಪ್ರತಿ ಎಕರೆಗೆ 40 ಸಾವಿರ ರೂ. ಪರಿಹಾರ ನೀಡಬೇಕು. ಬೆಳೆವಿಮೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಿಸಾನ್ ಸಮ್ಮಾನ ಯೋಜನೆಯ ಹಣವನ್ನು ಎಲ್ಲ ರೈತರಿಗೂ ಬಿಡುಗಡೆ ಮಾಡಬೇಕು. ಮಹದಾಯಿ ಯೋಜನೆ ಶ್ರೀ ಜಾರಿಗೊಳಿಸಬೇಕು. ಸಂದ ಎಲ್ಲ ಬೇಡಿಕೆಗಳು ಈಡೇರದೇ ಇದ್ದಲ್ಲಿ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಆಧಾರ್ ಲಿಂಕ್ ಮಾಡುವ ಯೋಜನೆ ಕೈಬಿಡಬೇಕೆಂದು ಹೆಸ್ಕಾಂ ಎಂಡಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಮಾಧನಬಾವಿ, ಉಳವಪ್ಪ ದಿವಟಗಿ, ಮಾರುತಿ ಸುಂಕದ, ಎಂ.ಕೆ. ಮಟ್ಟಿ, ಶಾಂತಪ್ಪ ಸೋಮಾಪುರ ಇದ್ದರು.