ಸೋಯಾಬೀನ್ ಬೀಜ ವಿತರಣೆಗೆ ರೈತರ ಆಗ್ರಹ

oplus_4194304
oplus_4194304
Published on

ಬೈಲಹೊಂಗಲ: ರೈತರಿಗೆ ಸೋಯಾಬೀನ್ ಬಿತ್ತನೆ ಬೀಜ ವಿತರಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ನೇಗಿಲಯೋಗಿ ರೈತ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ನೇಗಿಲಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ರೈತರಿಗೆ ಇದುವರೆಗೂ ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಇಲಾಖೆ ಮುಂದಾಗಿಲ್ಲ. ರೈತರಿಗೆ ಅವಶ್ಯವಿರುವ ಸೋಯಾಬೀನ್, ಮೆಕ್ಕೆಜೋಳ, ಹೆಸರು ಬೀಜಗಳನ್ನು ಕೂಡಲೇ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ವಿಳಂಬವಾದಲ್ಲಿ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮನವಿ ಸ್ವೀಕರಿಸಿದ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ಎರಡು ದಿನದಲ್ಲಿ ಸೋಯಾಬೀನ್ ಬೀಜ, ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನೇಗಿಲ ಯೋಗಿ ರೈತ ಸಂಘದ ಸದಸ್ಯರಾದ ಅನಿಲ ಗಿರನ್ನವರ, ಮಹಾಂತೇಶ ಬೋಳನ್ನವರ, ಶಿವಪ್ಪ ಲಿಂಬೆನ್ನವರ, ಶಂಕರಗೌಡ ಪಾಟೀಲ, ಬಸಪ್ಪ ಜಂಬಗಿ, ಬಾಬಣ್ಣ ಸಂಗೊಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net