ಬೆಳೆಹಾನಿ ನೀಡುವಂತೆ ರೈತರ ಒತ್ತಾಯ

IMG-20241121-WA0017.jpg
Published on

ಬೆಳಗಾವಿ: ಭತ್ತದ ಬೆಳೆಗೆ ಕ್ವಿಂಟಾಲ್‌ಗೆ 3 ಸಾವಿರ ರೂ. ನಿಗದಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಭತ್ತದ ಬೆಳೆಗೆ ಖರ್ಚು ವೆಚ್ಚ ಬಹಳಷ್ಟಿದ್ದು, ಈಗಿರುವ ಬೆಲೆ ಸಾಕಾಗದೆ ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಭತ್ತಕ್ಕೆ ಕನಿಷ್ಠ ಮೂರು ಸಾವಿರ ರೂ. ಸರ್ಕಾರ ನಿಗದಿ ಮಾಡಬೇಕು ಹಾಗೂ ಮುಂಗಾರು ಮಳೆಯಿಂದ ಆಲೂಗಡ್ಡೆ ಸೇರಿ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಕೂಡಲೇ ಪರಿಹಾರ ಹಣ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮೂಲಕ ಒತ್ತಾಯಿಸಿದರು. ಅಪ್ಪಾಸಾಹೇಬ ದೇಸಾಯಿ, ಮಾರುತಿ ಕಡೆಮನಿ, ಸುಭಾಷ ಧಾಯಗೊಂಡೆ, ರಾಮನಗೌಡ ಪಾಟೀಲ, ರಾಜು ಕಾಗಣೇಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net