

ವಿಜಯವಾಣಿ ಸುದ್ದಿಜಾಲ ಆನೇಕಲ್
ದೇಶದಲ್ಲಿ ಪ್ರತಿಯೊಬ್ಬರೂ ರೈತರಿಗೆ ಗೌರವ ಸಲ್ಲಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಸಹಜ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಎನ್.ಆರ್. ಶೆಟ್ಟಿ ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಸಾವಯವ ತರಕಾರಿ ಬೆಳೆಗಾರರ ಸಂಘದಿಂದ ಆಯೋಜಿಸಿದ್ದ ರೈತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತನಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು ಸರ್ಕಾರಗಳ ಹಾಗೂ ಇಲಾಖೆಗಳ ಆದ್ಯತೆ. ಸಾವಯುವ ಕೃಷಿ ಎಲ್ಲೆಡೆ ತಲುಪಿದಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಮಾಯಸಂದ್ರ ಸಂಘದಿಂದ ಸ್ಥಳೀಯವಾಗಿ ಸಾವಯುವ ಕೃಷಿ ಬಗ್ಗೆ ರೈತರು ಒತ್ತು ನೀಡಬೇಕು ಎನ್ನುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದೇವೆ. ಈ ಬಾರಿ ಉತ್ತಮ ಸಲು ಬೆಳೆದ ರೈತರನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಹಾಗೂ ರೈತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತಿದೆ ಎಂದರು.
ರಂಗೋಲಿ ಸ್ಪರ್ಧೆ ವಿಜೇತ ಮಹಿಳೆಯರು: ಪ್ರಥಮ-ಲಕ್ಮಮ್ಮ ಮತ್ತು ಶೋಭಾ, ದ್ವಿತೀಯ, ನೇತ್ರಾ, ಸುಜಾತಾ, ತೃತೀಯ-ಸಂಚಿತ, ನಾಲ್ಕನೇ ಬಹುಮಾನ-ಸವಿತಾ, ಐದನೇ ಬಹುಮಾನ-ಶಮಂತಾ, ಸಮಾಧಾನಕರವಾಗಿ ರೂಪಾ ಹಾಗೂ ಪುಟ್ಟಮ್ಮ ಪ್ರಶಸ್ತಿ ಪಡೆದರು.
ಸಹಜ ಆರ್ಗನಿಕ್ ಪ್ರೊಡ್ಯೂಸರ್ ಕಂಪನಿಯ ಸೋಮೇಶ್, ನಿರ್ದೇಶಕರಾದ ಮುರುಗೇಶ್, ಕೆ ಎಸ್ ಮಂಜುನಾಥ್, ಪ್ರದೀಪ್, ಕಾಂತರಾಜು, ಮಂಜುನಾಥ್, ಅಂಜಿನಪ್ಪ, ವೆಂಕಟೇಶ್, ಸಹಜ ಆಧುನಿಕ ಪ್ರೊಡ್ಯೂಸರ್ ಕಂಪನಿಯ ಸದಸ್ಯ ನವೀನ್ ಇತರರಿದ್ದರು