ಯಾರಿಗೂ ತಲೆಬಾಗದೆ ಸ್ವಾವಲಂಬಿಗಳಾಗಿ ಬದುಕಿ ; ರೈತರಿಗೆ ನಿವೃತ್ತ ಡಿಜಿ-ಐಜಿಪಿ ಡಾ.ಶಂಕರ್ ಮಹದೇವ್ ಬಿದರಿ ಸಲಹೆ

23 RMN-MGD P01 (1)111111111111
Published on

ಮಾಗಡಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸರ್ಕಾರಗಳಿಂದ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಮಹದೇವ್ ಬಿದರಿ ಬೇಸರಿಸಿದರು.

ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ 5ನೇ ವರ್ಷದ ರೈತ ದಿನಾಚರಣೆ ಮತ್ತು ಪ್ರಗತಿ ಪರ ರೈತರ ದಿನ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ರೈತರು ಅಸ್ತಿತ್ವ ಉಳಿಸಿಕೊಳ್ಳಲು ಸಂಟಿತರಾಗುವುದು ಅನಿವಾರ್ಯವಾಗಿದೆ ಎಂದರು. 70 ವರ್ಷದಿಂದ ರೈತ ಬಡತನದಲ್ಲಿಯೇ ಬದುಕುತ್ತಿದ್ದಾನೆ. ಇದನ್ನು ಹೋಗಲಾಡಿಸದಿದ್ದರೆ ರಾಷ್ಟ್ರಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅತ್ಯಂತ ಪ್ರಾಮಾಣಿಕತೆ, ನಿಷ್ಠೆಯಿಂದ ದುಡಿಯುವ ರೈತ ವರ್ಗಕ್ಕೆ ಈ ಮೌಲ್ಯಗಳೇ ಮುಳುವಾಗುತ್ತಿವೆ. ಈ ಸಂಬಂಧ ರೈತರು ಜಾಗೃತರಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ರಾಜಕಾರಣಿಗಳು ಚುನಾವಣೆಗಳಲ್ಲಿ ಟಿಕೆಟ್ ಪಡೆಯಲು ಎಷ್ಟು ಕೋಟಿ ಖರ್ಚು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರನ್ನು ಸರ್ಕಾರ ರಕ್ಷಣೆ ಮಾಡದಿದ್ದರೂ ಪರಮಾತ್ಮ, ಭೂಮಿ ತಾಯಿ ರಕ್ಷಣೆ ಮಾಡುತ್ತಾರೆ. ಯಾರಿಗೂ ತಲೆಬಾಗದೆ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ವೀರಶೈವ ಮುಖಂಡ ಕೆ.ಪಿ.ಮಹದೇವ ಶಾಸ್ತ್ರಿ ಮಾತನಾಡಿ, ರೈತರು ಸಂಟಿತರಾದರೆ ವಿಧಾನಸೌಧ ನಡುಗಿಸಬಹುದು. ಪ್ರಸ್ತುತ ಅಂತಹ ಸಂಟನೆ ಅನಿವಾರ್ಯವಾಗಿದೆ ಎಂದರು. ತಾಲೂಕು ರೈತ ಸಂದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಬೆಟ್ಟಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಜಿಪಂ ವಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭೆ ಅಧ್ಯಕ್ಷೆ ವಿಜಯ ರೂಪೇಶ್, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಎಪಿಎಂಸಿ ಅಧ್ಯಕ್ಷ ಸಿಎಂ ಮಾರೇಗೌಡ, ಜೆಡಿಎಸ್ ಅಧ್ಯಕ್ಷೆ ಶೈಲಜಾ, ಕರ್ನಾಟಕ ಒಳಚರಂಡಿ ಮಂಡಳಿ ಮಾಜಿ ನಿರ್ದೆಶಕ ಹರೀಶ್, ಗುತ್ತಿಗೆದಾರ ಕಲ್ಲನಾಯಕನಹಳ್ಳಿ ಮಂಜುನಾಥ್, ಟಿ.ಕೆ.ರಾಮು, ಜೆಸಿಬಿ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net