ಸಿರಿಗೆರೆ ಶ್ರೀಗಳ ಬಳಿ ರೈತರು ಅಳಲು

SIRIGERE SWAMIJI (2)
Published on

ಸಿರಿಗೆರೆ: ಭರಮಸಾಗರ, ಸಿರಿಗೆರೆ ಹೋಬಳಿಯಾದ್ಯಂತ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಮೆಕ್ಕಜೋಳ ಸೇರಿ ವಿವಿಧ ಬೆಳೆಗಳು ಒಣಗಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು, ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಬಳಿ ಅಳಲು ತೋಡಿಕೊಂಡರು.

ತರಳಬಾಳು ಮಠದ ಶ್ರೀ ಕಾಶಿ ಮಹಾಲಿಂಗ ಸ್ವಾಮೀಜಿ ಗದ್ದುಗೆಯಲ್ಲಿ ಶ್ರಾವಣ ಕಡೆ ಸೋಮವಾರದ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮದಲ್ಲಿ ಶ್ರೀಗಳ ಬಳಿ ಕೃಷಿಕರು ಸಮಸ್ಯೆ ಹೇಳಿಕೊಂಡರು.

ನಮ್ಮ ನೆರವಿಗೆ ಬರುವಂತೆ ಹಾಗೂ ಚಿತ್ರದುರ್ಗ ತಾಲೂಕನ್ನು ಬರಗಾಲ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಮೇಲೆ ಒತ್ತಡ ತರುವಂತೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net