ಸಾಲಬಾಧೆಯಿಂದ ರೈತರ ಆತ್ಮಹತ್ಯೆ

Devappa
Published on

ರಾಯಚೂರು: ಸಾಲಬಾಧೆಯಿಂದ ರೈತನೊಬ್ಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ.
ಗ್ರಾಮದ ದೇವಪ್ಪ (50) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, 1.10 ಎಕರೆ ಸ್ವಂತ ಭೂಮಿ ಹಾಗೂ 12 ಎಕರೆ ಭೂಮಿಯನ್ನು ಲೀಸ್ ಪಡೆದು ಕೃಷಿ ಮಾಡುತ್ತಿದ್ದ. ಬೆಳೆಗಾಗಿ ಖಾಸಗಿ ಬ್ಯಾಂಕ್‌ನಲ್ಲಿ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದ.
ಮಳೆಯಿಲ್ಲದ ಬೆಳೆ ಹಾನಿಯಾಗಿ ಸಾಲ ತೀರಿಸಲಾಗದೆ ಮನನೊಂದು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net