ವಕ್ಫ್ ಹೆಸರು ತೆಗೆಯಲು ತಹಸೀಲ್ದಾರ್ ಭರವಸೆ, ಸಿಹಿ ಹಂಚಿ ಸಂಭ್ರಮಿಸಿದ ರೈತರು

6 UPBR 1
Published on

ಉಪ್ಪಿನಬೆಟಗೇರಿ: ಗ್ರಾಮದ ರೈತರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದ್ದನ್ನು ತೆಗೆದು ಸರಿಪಡಿಸುವುದಾಗಿ ತಹಸೀಲ್ದಾರ್ ಡಿ.ಎಚ್. ಹೂಗಾರ ಭರವಸೆ ನೀಡಿದ್ದರಿಂದ ರೈತರು ಧಾರವಾಡದಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಈ ಕುರಿತು ತಹಸೀಲ್ದಾರ್ ಡಿ.ಎಚ್. ಹೂಗಾರ ಅವರು ಸಭೆ ನಡೆಸಿ ಎಲ್ಲಿ ತಪ್ಪು ನಡೆದಿದೆಯೋ ಅದನ್ನು ಸರಿಪಡಿಸಬೇಕು. ಇನ್ನೆರಡು ದಿನದಲ್ಲಿ ರೈತರ ಪಹಣಿ ಪತ್ರಿಕೆಯಲ್ಲಿ ದಾಖಲಾಗಿರುವ ವಕ್ಫ್ ಎಂಬ ಹೆಸರನ್ನು ತೆಗೆದು ಹಾಕಬೇಕು ಎಂದು ತಹಸೀಲ್ದಾರ್ ಕೋರ್ಟ್ ಮೂಲಕ ಆದೇಶಿಸಿದ್ದಾರೆ.

ಮಂಗಳವಾರ ನಡೆದ ಸಭೆಯಲ್ಲಿ ಕೇವಲ ಉಪ್ಪಿನಬೆಟಗೇರಿ ಗ್ರಾಮಸ್ಥರ ಸಮಸ್ಯೆಯನ್ನು ಮಾತ್ರ ಬಗೆಹರಿಸಲು ಕ್ರಮ ಕೈಗೊಂಡ ಅಧಿಕಾರಿಗಳು, ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲೂ ಇದೇ ರೀತಿ ಆಗಿದ್ದು, ಆ ಬಗ್ಗೆ ತಹಸೀಲ್ದಾರರು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net