ಜಾನುವಾರಗಳನ್ನು ಗೋಶಾಲೆಗೆ ಕಳಿಸಿಕೊಡಿ

Untitled design (1)
ಮಹಾಲಿಂಗಸ್ವಾಮೀಜಿ
Published on

ಸಿಂಧನೂರು: ರಾಯಚೂರು-ಕೊಪ್ಪಳ ಜಿಲ್ಲೆಗಳ ರೈತರು ದನ-ಕರು, ಎತ್ತುಗಳನ್ನು ಮೇವಿನ ಕೊರತೆ, ಬರಗಾಲದ ಕಾರಣಗಳಿಂದಾಗಿ ಅವುಗಳನ್ನು ಕಸಾಯಿಖಾನೆಗೆ ಸಾಗಿಸಬಾರದು. ನಮ್ಮ ಗೋಶಾಲೆಗೆ ಸೇರಿಸಬೇಕೆಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಪೀಠಾಧಿಪತಿ ಮಹಾಲಿಂಗಸ್ವಾಮೀಜಿ ತಿಳಿಸಿದ್ದಾರೆ.

ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಬಾರದು

ಹತ್ತು ವರ್ಷಗಳಿಂದ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠವು ಗೋಶಾಲೆ ನಡೆಸುತ್ತಿದೆ. ಸಣ್ಣ ಪ್ರಮಾಣದಲ್ಲಿದ್ದ ಗೋಶಾಲೆಯಲ್ಲೀಗ 200ಕ್ಕೂ ಅಧಿಕ ಜಾನುವಾರುಗಳಿವೆ. ಇದಕ್ಕಾಗಿ ಪ್ರತ್ಯೇಕ ಜಮೀನು, ನೆರಳು, ಮೇವು, ನೀರಿನ ವ್ಯವಸ್ಥೆಯಿದೆ. ಈಗ ಬರದ ತೀವ್ರತೆ ಹೆಚ್ಚಿರುವುದರಿಂದ ಮೇವಿನ ಸಮಸ್ಯೆಯಾಗಿ, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮಲ್ಲಿರುವ ಜಾನುವಾರುಗಳನ್ನು ಗೋಶಾಲೆಗೆ ತಂದು ಬಿಡಬೇಕು. ಯಾವುದೇ ಕಾರಣಕ್ಕೆ ಕಸಾಯಿಖಾನೆಗೆ ಕಳಿಸಬಾರದು. ಈಗ ಭತ್ತ ಕಟಾವು ನಡೆದಿದ್ದು, ರೈತರು ಭತ್ತದ ಹುಲ್ಲನ್ನು ಸುಡಬಾರದು. ಗೋಶಾಲೆಗೆ ಕೊಡುವ ಮೂಲಕ ನಮ್ಮ ಸೇವೆಯಲ್ಲಿ ನೀವೂ ಕೈಜೋಡಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net