ಹಾಳಾದ ಬೆಳೆಯೊಂದಿಗೆ ಬಂದ ರೈತರು

7 Dwd 1A - Copy
Published on

ಧಾರವಾಡ: ಜಿಲ್ಲೆಯ ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿಲ್ಲ. ಕೇಂದ್ರ ಅಧ್ಯಯನ ತಂಡ ಆಗಮನದ ಮಾಹಿತಿ ತಿಳಿದ ಕಲಘಟಗಿ ರೈತರು ಅಮ್ಮಿನಭಾವಿಗೆ ತೆರಳಿ ಒಣಗಿದ ಕಬ್ಬು ಮತ್ತು ಗೋವಿನಜೋಳದ ಬೆಳೆಗಳನ್ನು ಅಽಕಾರಿಗಳಿಗೆ ತೋರಿಸಿದರು.
ಒಣಗಿರುವ ಕಬ್ಬು ಮತ್ತು ಕಾಳು ಕಟ್ಟದ ಗೋವಿನಜೋಳದ ತೆನೆಗಳನ್ನು ತೋರಿಸಿದರು. ಕಲಘಟಗಿಯನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಉಳವಪ್ಪ ಬಳಿಗೇರ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net