ಜಮಾಬಂದಿಯಿಂದ ರೈತರಿಗೆ ಅನುಕೂಲ

25blrp1
ಬೇಲೂರು ಪಟ್ಟಣದ ಹಳೇ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಜಮಾಬಂದಿ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಮಮತಾ ಉದ್ಘಾಟಿಸಿದರು.
Published on

ಬೇಲೂರು: ಲೆಕ್ಕಪತ್ರಗಳನ್ನು ಸರಿಪಡಿಸಿ ಒಂದೆಡೆ ಸಂಗ್ರಹಿಸಿ ಇಡುವುದರಿಂದ ರೈತರಿಗೆ ಅನುಕೂಲವಾಗಲಿದ್ದು, ಈ ಕಾರಣಕ್ಕಾಗಿಯೇ ಜಮಾಬಂದಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಮಮತಾ ತಿಳಿಸಿದರು.

ವಿಜಯದಶಮಿ ಅಂಗವಾಗಿ ಪಟ್ಟಣದ ಹಳೇ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಮಾಬಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಜುಲೈನಲ್ಲಿ ಎಲ್ಲ ಕಡತಗಳನ್ನು ಒಂದೆಡೆ ಸಂಗ್ರಹಿಸಡಲಾಗುತ್ತದೆ. ಪ್ರಮುಖವಾಗಿ ರೈತರ ಜಮೀನು, ಆಸ್ತಿಗಳ ಲೆಕ್ಕ ಪತ್ರಗಳಲ್ಲಿ ಲೋಪವಿದ್ದಲ್ಲಿ ಸರಿಯಾದ ದಾಖಲೆ ಪಡೆದು ಅವುಗಳನ್ನು ಸರಿಪಡಿಸಿ ಒಂದೆಡೆ ಸಂಗ್ರಹಿಸಿಡಲಾಗುವುದು ಎಂದರು.

ಮಹಾರಾಜರ ಕಾಲದಲ್ಲಿ ಸಂಬಂಧಿಸಿದವರು ಖುದ್ದು ಭೇಟಿ ನೀಡಿ ಕಂದಾಯ ವಸೂಲಿ ಮಾಡುವುದರ ಜತೆಗೆ ದಾಖಲೆಗಳನ್ನು ಪರಿಶೀಲಿಸಿ ಲೋಪ ಆಗದಂತೆ ಎಚ್ಚರ ವಹಿಸುತ್ತಿದ್ದರು. ಈ ಕಾರ್ಯಕ್ರಮಕ್ಕೆ ವಿಜಯದಶಮಿ ದಿನದಂದು ಚಾಲನೆ ನೀಡಲಾಗುತ್ತಿತ್ತು ಎಂಬುದು ತಿಳಿದಿದೆ. ಅಂತೆಯೇ ಬೇಲೂರಿನಲ್ಲಿ ವಿಜಯದಶಮಿಯಂದೇ ಚಾಲನೆ ನೀಡಲಾಗಿದೆ. ಪ್ರತಿ ಹೋಬಳಿಯ ನಾಡ ಕಚೇರಿಯಲ್ಲಿಯೂ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಕಸಬಾ ರಾಜಸ್ವ ನಿರೀಕ್ಷಕ ಯೋಗಾನಂದ್, ಗ್ರಾಮಲೆಕ್ಕಾಧಿಕಾರಿ ಹನುಮಂತು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net