

ಸವದತ್ತಿ: ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆ ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತಿಸುವ ಮೂಲಕ ಸರ್ಕಾರ ರೆತರಿಗೆ ಅನುಕೂಲ ಕಲ್ಪಿಸಿದೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಇಲ್ಲಿನ ದಾಖಲಾತಿಗಳ ಕಚೇರಿಯಲ್ಲಿ ಶನಿವಾರ ಭೂ ಸುರಾ ಯೋಜನೆಯಡಿ ಸವದತ್ತಿ &ಯರಗಟ್ಟಿ ತಾಲೂಕುಗಳ ಅಭಿಲೇಖಾಲಯದ ದಾಖಲೆ ಗಣಕೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ದಾಖಲೆಗಳು ಆಧುನೀಕರಣ ಯೋಜನೆಯಡಿ ಡಿಜಿಟಲೀಕರಣಗೊಳ್ಳಲಿವೆ. ಭೂದಾಖಲೆಗಳ ಆಧುನಿಕರಣದಿಂದ ದಾಖಲೆಗಳು ಶಿಥಿಲವಾಗುವುದು, ನಕಲು ದಾಖಲೆಗಳ ಸಷ್ಟಿಯನ್ನು ತಡೆಗಟ್ಟಿ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಲಿದೆ. ಸುಮಾರು 3 ಲಕ್ಕಿಂತ ಹೆಚ್ಚಿನ ದಾಖಲಾತಿಗಳು ಡಿಜಿಟಲೀಕರಣ ಆಗಬೇಕಿದೆ. ರೆತರ ಭವಿಷ್ಯ ಅಡಗಿರುವ ಈ ದಾಖಲಾತಿಗಳು ಹಳೆಯದಾಗಿದ್ದು ಅತ್ಯಂತ ಸ್ಮೂವಾಗಿ ಜವಾಬ್ದಾರಿಯಿಂದ ದಾಖಲಾತಿ ಕಾರ್ಯ ನಡೆಯಲಿ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಡಿಜಿಟಲೀಕರಣ ಸರ್ಕಾರದ ಮಹತ್ವಾಕಾಂೆ ಯೋಜನೆಯಾಗಿದ್ದು, ಇದರಿಂದ ರೆತರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾಗಿದ್ದು, ಈಗ ಪ್ರತಿ ತಾಲೂಕಿನ ಭೂ ದಾಖಲಾತಿ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ದಾಖಲಾತಿಗಾಗಿ ಪರದಾಡುವ ರೆತರಿಗೆ ಸುಲಭವಾಗಿ ದಾಖಲಾತಿ ತಲುಪಿಸುವಲ್ಲಿ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು. ಯರಗಟ್ಟಿ ಮತ್ತು ಸವದತ್ತಿ ತಾಲೂಕಿಗೆ ತಲಾ 6 ರಂತೆ 12 ಜನ ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ ಒಂದು ಸಾವಿರ ಡೇಟಾಎಂಟ್ರಿ ನಿರೀಸಲಾಗಿದ್ದು ದಾಖಲಾತಿಗಳ ಸಂರಣೆ ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ಆಧಾರಿತ 12 ಡಾಟಾ ಆಪರೇಟರ್ಗಳಿಗೆ ಶಾಸಕ ವಿಶ್ವಾಸ ವೆದ್ಯ ಆದೇಶ ಪತ್ರ ಹಸ್ತಾಂತರಿಸಿದರು. ಯರಗಟ್ಟಿ ತಹಸೀಲ್ದಾರ್ ಎಂ.ಎನ್.ಗುಂಡಪ್ಪಗೋಳ, ಗ್ರೇಡ್ 2 ತಹಸೀಲ್ದಾರ್ ಎಂ.ಎನ್.ಮಠದ, ಅಭಿಲೇಖಾಲಯ ಅಧಿಕಾರಿ ಪ್ರವಿಣ ಕಾವಿ, ಪಶು ವೆದ್ಯಾಧಿಕಾರಿ ಅನಿಲ ಮರಲಿಂಗನವರ, ಬಸವರಾಜ ಪ್ರಭುನವರ, ಮಲ್ಲು ಜಕಾತಿ, ಪ್ರವಿಣ ರಾಮಪ್ಪನವರ ಇತರರು ಇದ್ದರು.