

ಸಿರಿಗೇರಿ: ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರು ಜೋಳ ಮಾರಾಟಕ್ಕೆ ದೂರದ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳುವುದು ತಪ್ಪುತ್ತದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಸೂರಿಬಾಬು ಹೇಳಿದರು.
ಇದನ್ನೂ ಓದಿ:ವಿದ್ಯುತ್ ಉಪಕೇಂದ್ರದಿಂದ ರೈತರಿಗೆ ಅನುಕೂಲ
ಸಮೀಪದ ಮುದ್ದಟ್ಟನೂರು ಕ್ಯಾಂಪ್‌ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಜೋಳ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರುದ್ರಪಾದ, ಮಣ್ಣೂರು, ಸುಗೂರು, ಚನ್ನಪಟ್ಟಣ, ಹಾವಿನಾಳು, ಸಿರಿಗೇರಿ, ವೀರಾಪುರ ಗ್ರಾಮದ ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರಿಗೆ ಅನುಕೂಲವಾಗಲಿದೆ. 26 ರೈತರು 20 ಕ್ವಿಂಟಾಲ್‌ನಿಂದ 100 ಕ್ವಿಂಟಾಲ್‌ವರೆಗೆ ಜೋಳ ಮಾರಾಟ ಮಾಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ 100 ರೈತರು ಲಾಗಿನ್ ಆಗಬಹುದು ಎಂದರು.
ರೈತ ಸಂಘದ ಅಧ್ಯಕ್ಷ ಮಾಧವರೆಡ್ಡಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪಿ.ಸತ್ಯನಾರಾಯಣ, ನಿರ್ದೇಶಕ ಕೆ.ಶ್ರೀನಿವಾಸ ರಾವ್, ಆಹಾರ ನೀರಿಕ್ಷಕ ಮಹಾರುದ್ರಗೌಡ, ಕಾರ್ಯದರ್ಶಿ ಪರಶುರಾಮ ಇತರರಿದ್ದರು.