ರೈತರಿಗೆ ಸಹಕಾರಿ ಸಂಘಗಳಿಂದ ಅನುಕೂಲ

Farmers benefit from co-operative societies
Farmers benefit from co-operative societies
Published on

ಲೋಕಾಪುರ: ಸಹಕಾರ ಮತ್ತು ಸೌಹಾರ್ದ ಕ್ಷೇತ್ರದಲ್ಲಿ ಸಹಕಾರ, ಸಹಯೋಗ, ಸೌಹಾರ್ದತೆಯ ಭಾವನೆಗಳಿರುತ್ತವೆ. ಸಹಕಾರ ಸೌಹಾರ್ದ ಸಂಸ್ಥೆಗಳು ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದರಿಂದ ಇಂತಹ ಸಂಸ್ಥೆಗಳು ಜನಸಾಮಾನ್ಯರ ಉನ್ನತಿಗೆ ಆಧಾರಸ್ತಂಭವಾಗುತ್ತಿವೆ ಎಂದು ಹಾರೋಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಆಯ್.ಆರ್.ಮಠಪತಿ ಹೇಳಿದರು.

ಪಟ್ಟಣದಲ್ಲಿ ಹಾರೂಗೇರಿಯ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ 8ನೇ ಶಾಖೆಯನ್ನು ಲೋಕಾಪುರ ಪಟ್ಟಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಗತಿ ಸೌಹಾರ್ದ ಸಂಘವು ವಿವಿಧ ಕ್ಷೇತ್ರಗಳಲ್ಲಿ ಜನ ಸಾಮಾನ್ಯರಿಗೆ ಅಪಾರ ಕೊಡುಗೆ ನೀಡಿವೆ ಎಂದರು.

ಕಲ್ಮಡ ಲಕ್ಷಾನಟ್ಟಿಯ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಹಕಾರ ವಲಯವು ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಭಾಗವಾಗಿ ಎರಡು ದಶಕದಿಂದ ಆರಂಭವಾದ ಸೌಹಾರ್ದ ವ್ಯವಸ್ಥೆ ಇದೀಗ ಹೆಚ್ಚಿನ ವೇಗ ಪಡೆದುಕೊಂಡಿದೆ ಎಂದರು.

ಸಂಘದ ಸಂಸ್ಥಾಪಕ ಬಿ.ವಿ.ಬಿರಾದಾರ ಮಾತನಾಡಿ, ಅಲ್ಪಾವಧಿಯಲ್ಲಿ ಸಂಸ್ಥೆ ಅಧಿಕ ಠೇವಣೆ ಹೊಂದಿದ್ದು, ಉತ್ತಮ ಬೆಳವಣೆಗೆಯತ್ತ ಸಾಗುತ್ತಿದೆ ಎಂದರು.

ಸದಸ್ಯರ ಠೇವಣಿಗಳನ್ನು ಗಣ್ಯರು ಈ ವೇಳೆ ವಿತರಿಸಿದರು. ಡಾ. ಎಂ.ವಾಯ್.ಕಟ್ಟಿ, ಶಾಖಾ ಆಡಳಿತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಪಾಟೀಲ, ಗಿರೀಶ ಕೊಪ್ಪದ, ಲೋಕಣ್ಣ ಪಾಟೀಲ ವೆಂಕಣ್ಣ ಕತ್ತಿ, ವೆಂಕಪ್ಪ ಕೆಂಚರಡ್ಡಿ, ನಿಂಗಣ್ಣ ಮುದ್ದಾಪುರ, ಹಣಮಂತ ಚಿಚಖಂಡಿ, ಪಾಂಡು ಅರಕೇರಿ, ಸದಾಶಿವ ಹಣಮನ್ನವರ, ಹಣಮಮತ ಪಡಮೂಲಿ, ಭೀಮಪ್ಪ ಕೆಂಚರಡ್ಡಿ, ಬಾಲನಗೌಡ ಪಾಟೀಲ, ಶಾಖಾ ಸಲಹಾ ಮಂಡಳಿಯ ವೆಂಕಣ್ಣ ಪಾಟೀಲ, ರವಿ ಪಾಟೀಲ, ಪ್ರಲ್ಹಾದ ಶಿರೂರ, ಯಲ್ಲಪ್ಪ ಕಿವಡಿ, ಭೀಮನಗೌಡ ಪಾಟಿಲ, ನೈರುತ್ಯ ಪರಪ್ನವರ, ಬಸಲಿಂಗಪ್ಪ ಕಟ್ಟಿ ಹಾಗೂ ಶಾಖಾ ವ್ಯವಸ್ಥಾಪಕ ಮಂಜುನಾಥ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net