ಸಹಕಾರಿ ಬ್ಯಾಂಕ್‌ನಿಂದ ರೈತರಿಗೆ ಅನುಕೂಲ

KCC BANK
Published on

ನರೇಗಲ್ಲ: ಪಟ್ಟಣದ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ಬುಧವಾರ ಬ್ಯಾಂಕಿನ ಸಂಸ್ಥಾಪನಾ ದಿನ ಆಚರಿಸಲಾಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ಸಂಕನಗೌಡ್ರ ಮಾತನಾಡಿ, ‘30 ಸಾವಿರ ರೂ. ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ನೂರಾರು ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ರೈತರಿಗೆ ಕೃಷಿ ಸಾಲ, ಕೃಷಿಯೇತರ, ವೇತನ ಆಧಾರಿತ ಸಾಲಗಳು, ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಜತೆಗೆ ಸ್ಥ ಸಹಾಯ ಸಂಘಗಳಿಗೆ ಹಣಕಾಸು ಸೌಲಭ್ಯ ನೀಡುವ ಮೂಲಕ ಎಲ್ಲ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿದೆ’ ಎಂದರು.

ಬ್ಯಾಂಕಿನ ಸಂಸ್ಥಾಪಕ ರಾವಬಹದ್ದೂರ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ರಾವಬಹದ್ದೂರ ಅರಟಾಳ ರುದ್ರಗೌಡರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಇಬ್ಬರು ರೈತರಿಗೆ ಕೃಷಿ ಯಂತ್ರ ಸಾಲದಡಿ ಟ್ರ್ಯಾಕ್ಟರ್ ವಿತರಿಸಲಾಯಿತು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಳಪ್ಪ ಸೋಮಗೊಂಡ, ನಿಂಗಪ್ಪ ಕಣವಿ, ಬಿ.ಬಿ. ಬಿಷ್ಟನಗೌಡ್ರ, ಕೆ.ಎಚ್. ಕಿರಟಗೇರಿ, ಎ.ಬಿ. ನಾಯಕ, ಎಂ.ಪಿ. ಮೂಲಿಮನಿ, ಕರಿಯಪ್ಪ ಛಲವಾದಿ, ಕೆ.ಎಲ್. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net