

ಕೊಳ್ಳೇಗಾಲ: ಭರಚುಕ್ಕಿ ಜಲಪಾತ ಬಳಿ ಎರಡನೇ ಹಂತದ ಪಯನಿಯರ್ ಪವರ್ ಸ್ಟೇಷನ್ ಕಾಮಗಾರಿ ಆರಂಭಿಸಲು ಅನುಮತಿ ನೀಡಬಾರದೆಂದು ರೈತ ಸಂಘ ಒತ್ತಾ ಯಿಸಿದೆ.
ತಾಲೂಕು ರೈತ ಸಂಘದ ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಪೆರಿಯಾನಾಯಗಂ ಹಾಗೂ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಅವರು ಎರಡನೇ ಹಂತದ ಕಾಮಗಾರಿ ನಡೆಸುವುದಕ್ಕೆ ಅನುಮತಿ ನೀಡಬಾರದೆಂದು ಪಟ್ಟಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಈ ಹಿಂದೆ ಮಲೆ ಮಹದೇಶ್ವರ ಬೆಟ್ಟದ ವನ್ಯ ಜೀವಿ ಧಾಮದ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹಾಗೂ ಜಾವಿದ್ ಅವರು ಈ ಕಾಮಗಾರಿಗೆ ಅನುಮತಿ ನಿರಾಕರಿಸಿದ್ದರು. ಇದೀಗ ಮತ್ತೆ ಎರಡನೇ ಹಂತದ ಕಾಮಗಾರಿ ನಡೆಸಲು ಪಯನಿಯರ್ ಕಂಪನಿ ಅನುಮತಿ ಪಡೆಯಲು ಪ್ರಯತ್ನಿಸುತ್ತಿರುವುದು ರೈತ ಸಂಘದ ಗಮನಕ್ಕೆ ಬಂದಿದೆ. ಭರಚುಕ್ಕಿ ಪ್ರದೇಶ ಮೀಸಲು ಅರಣ್ಯ ಪ್ರದೇಶಕ್ಕೆ ಒಳಪಡಲಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳಿವೆ. ಹಾಗೊಂದು ವೇಳೆ ಕಾಮಗಾರಿಗೆ ಅನುಮತಿ ನೀಡಿ ವನ್ಯ ಜೀವಿಗಳ ಜೀವನಕ್ಕೆ ಆಡಚಣೆ ಮಾಡಿದರೆ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
.