ಯಡಹುಂಡಿಯಲ್ಲಿ ರೈತ ಸಂಘ, ಹಸಿರು ಸೇನೆ ಉದ್ಘಾಟನೆ

02-MAY-GPT-1
ಗುಂಡ್ಲುಪೇಟೆ ತಾಲೂಕಿನ ಯಡಹುಂಡಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗ್ರಾಮಘಟಕ ಆರಂಭಿಸಲಾಯಿತು. ಪಚ್ಚೆ ನಂಜುಂಡಸ್ವಾಮಿ, ವಿದ್ಯಾಸಾಗರ, ರಾಮೇಗೌಡ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ಯಡಹುಂಡಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಆರಂಭಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನರು ರೈತ ಸಂಘಟನೆಗೆ ಸೇರ್ಪಡೆಗೊಂಡರು. ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಭುಸ್ವಾಮಿ, ಉಪಾಧ್ಯಕ್ಷರಾಗಿ ಕುಮಾರ್, ಹೋಬಳಿ ಅಧ್ಯಕ್ಷರಾಗಿ ರಮೇಶ್ ಹಾಗೂ ಗ್ರಾಮ ಘಟಕದ ಅಧ್ಯಕ್ಷರಾಗಿ ಮಹೇಶ್ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಶ್ರೀ ಕ್ಷೇತ್ರ ಬೊಪ್ಪನಪುರದ ಮಠದ ಭರತ್ ಶ್ರೀಗಳು, ಪ್ರತಿ ಜೀವಿಯೂ ರೈತ ಬೆಳೆದ ಅನ್ನದಿಂದಲೇ ಬದುಕಬೇಕಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಸಂಘಟನೆ ಮೂಲಕ ಹೋರಾಟ ಮಾಡುವಂತಾಗಿದೆ ಎಂದು ಹೇಳಿದರು.

ಸಂಘಟನೆ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ತಾಲೂಕಿನ ರೈತರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ವನ್ಯಜೀವಿಗಳ ಹಾವಳಿ ತಡೆಗಟ್ಟುವ, ಕಲ್ಲು ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆದ್ದರಿಂದ ರೈತರು ಗ್ರಾಮಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ವಿದ್ಯಾಸಾಗರ, ರಾಮೇಗೌಡ, ಗೌಡಳ್ಳಿ ಸೋಮಣ್ಣ, ಇಮ್ಮಾವು ರಘು, ಉತ್ತಂಗಿರಿಹುಂಡಿ ಮಹೇಶ್, ಹಸಿರು ಸೇನೆ ಅಧ್ಯಕ್ಷ ಕಾಳಸ್ವಾಮಿ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net