ಮೈಸೂರು: ಕಬ್ಬು ಬೆಳೆಗಾರರ ಹೋರಾಟ ಹಿತ ರಕ್ಷಣಾ ಸಮಿತಿಯಿಂದ ಆ. 26ರಂದು ತಿಂಗಳ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬ್ಯಾತಹಳ್ಳಿ ಮಾದಪ್ಪ ತಿಳಿಸಿದರು.
ಜೆ.ಪಿ.ನಗರದಲ್ಲಿರುವ ಸಿದ್ದಲಿಂಗೇಶ್ವರ ಬಡಾವಣೆಯಲ್ಲಿ ಅಂದು ಸಂಜೆ 4 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲೂಕಿನ ಕೆಡಗ ಗ್ರಾಮದ ಮೀನಾಕ್ಷಮ್ಮ, ಕೊಳ್ಳೇಗಾಲದ ಮತ್ತೀಪುರದ ಮಲ್ಲಿಕಾರ್ಜುನಪ್ಪ, ನಂಜನಗೂಡು ತಾಲೂಕಿನ ಗುರುಸಿದ್ದಪ್ಪ, ಕಾ.ಸು ನಂಜಪ್ಪ, ಜೆ.ಪಿ.ನಗರದ ಸಿ.ಜಿ.ಸಿದ್ದಲಿಂಗಸ್ವಾಮಿ, ಎಂ.ಎನ್. ಕಿರಣ್, ಶೇಖರ್ ಕಿರಗುಂದ ಅವರನ್ನು ಸನ್ಮಾನಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಿತಿಯ ಕಾ.ಸು. ನಂಜಪ್ಪ, ಸಿ.ಜಿ.ಸಿದ್ದಲಿಂಗಸ್ವಾಮಿ, ಜೀಮಾರಳ್ಳಿ ಶಿವಕುಮಾರ್ ಇದ್ದರು.