

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಿವಿಧ ಗ್ರಾಮದ ಜಮೀನಿನಲ್ಲಿ ಹತ್ತಿ, ತೊಗರಿ ಬಿತ್ತನೆ ರೈತರಿಗೆ ಜಿಂಕೆಗಳ ಹಾವಳಿಯಿಂದಾಗಿ ಕಂಗಾಲಾಗಿದ್ದು, ಜಮೀನಿನಲ್ಲಿ ಜಿಂಕೆಗಳು ಬರದಂತೆ ಕಾಯಲು ಕೂಲಿ ಕಾರ್ಮಿಕನನ್ನು ನೇಮಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಮುಂಗಾರು ಪೂರ್ವದಲ್ಲಿ ಮಳೆಯಾಗಿದ್ದರಿಂದ ರೈತರು ಸಂತಸದಿಂದ ಬಯಲು ಭೂಮಿಯಲ್ಲಿ ಮುಂಚಿತವಾಗಿಯೇ ಹತ್ತಿ, ತೊಗರಿ ಬಿತ್ತನೆ ಮಾಡಿದ ರೈತರು ಸಣ್ಣ ಮೊಳಕೆ ಹೊಡೆದಿರುವುದರಿಂದ ಜಿಂಕೆಗಳ ಹಾವಳಿ ನಿದ್ದೆಗೆಡಿಸಿದೆ. ಕಳೆದ 15 ದಿನಗಳಿಂದ ಪ್ರತಿ ದಿನ ಹಗಲು, ರಾತ್ರಿ ಬಯಲ ಭೂಮಿಯಲ್ಲಿ ಹಾಕಿದ ಹತ್ತಿ, ತೊಗರಿ ಬೀಜ ಮಣ್ಣೋಳಗಿಂದಟಿಕಿಸಲು ಹೊಡೆಯುತ್ತಿರುವಾಗಲೆ ನೂರಾರು ಸಂಖ್ಯೆಯಲ್ಲಿ ಜಿಂಕೆಗಳು ಜಮೀನಿನಲ್ಲಿ ಬೀಡು ಬಿಟ್ಟಿದ್ದರಿಂದ ಆ ಮೊಳಕೆ ತಿಂದು ಹಾಕಿ ಪೈರು ಹಾಳು ಮಾಡುತ್ತಿರುವುದು ನಷ್ಟದ ಭೀತಿ ಎದುರಾಗಿದೆ.
ಜಿಂಕೆ ಕಾಯಲೆಂದೆ ಸಿರವಾರ ಹಾಗೂ ಮಾನ್ವಿ ತಾಲೂಕಿನ ಹೋಕ್ರಾಣಿ,ತುಪ್ಪದೂರು, ಸಿಂಗಡದಿನ್ನಿ, ಮಾಚನೂರು,ಬೇವಿನೂರು,ಗಣದಿನ್ನಿ, ಶಾಖಪೂರ ಗ್ರಾಮದ ರೈತರು ಹಗಲು,ರಾತ್ರಿ ಈಗಿನಿಂದಲೆ ಹೊಲ ಕಾಯುವಂತಾಗಿ ಬೇಸತ್ತಿದ್ದಾರೆ.
ಬೇಸತ್ತ ರೈತರು ಆಷಾಡ ಗಾಳಿಯಿಂದಾಗಿ ಮಳೆ ಬಾರದೆ ಬಿತ್ತಿದ ತೊಗರಿ, ನಾಟಿದ ಹತ್ತಿ ಬೀಜ ಮೊಳಕೆ ಪ್ರಮಾಣ ಕುಸಿತವಾಗಿದ್ದಕ್ಕೆ ಚಿಂತೆಗೊಳಗಾದ ರೈತರಿಗೆ ಈ ಜಿಂಕೆಗಳ ಹಾವಳಿ ಮತ್ತಷ್ಟು ತಲೆನೋವು ತಂದೊಡ್ಡಿದೆ. ಸುತ್ತಲೂ ಹಳ್ಳ, ಕೊಳ್ಳಗಳು ಇರುವುದರಿಂದ ಹಗಲಲ್ಲೇ ನೂರಾರು ಸಂಖ್ಯೆಯ ಜಿಂಕೆಗಳ ಹಿಂಡು ಜಮೀನುಗಳಿಗೆ ಲಗ್ಗೆಡಿಸಲು ಇಡುತ್ತಿರುವುದರಿಂದ ಅವುಗಳ ಓಡಿಸಲು ಒಬ್ಬೊಬ್ಬರಿಗೆ ಭಯ ಶುರುವಾಗಿದೆ.
ಜಿಂಕೆಗಳ ಓಡಿಸಲು ನಾನಾ ಕಸರತ್ತು ಮಾಡುತ್ತಿದ್ದು ಒಂಟಿಯಾಗಿ ಹೋದರೆ ದಾಳಿ ಮಾಡಿದರೆ ಹೇಗೆ ಎಂಬ ಆತಂಕ ಎದುರಾಗಿದೆ. ಜಮೀನುಗಳಿಗೆ ಹಾವಳಿ ಮಾಡುವ ಜಿಂಕೆ ಮೊಳಕೆ ಹೊಡೆದ ಮೇಲೇಳುತ್ತಿರುವ ಪೈರು ತಿಂದು ಹಾಕಿದರೆ, ಕೆಲವು ಕಡೆ ಭೂಮಿಯಲ್ಲಿ ಹಾಕಿದ ಬೀಜವನ್ನೆ ಕೆದರುತ್ತಿರುವುದು, ಮೊಳಕೆ ತುಳಿದು ಹಾಕುತ್ತಿರುವುದು ಈ ಬಾರಿ ಮತ್ತೊಂದು ಬಗೆಯ ನಷ್ಟದ ಭೀತಿ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಈ ಜಿಂಕೆ ಹಾವಳಿ ತಡೆಯಲು ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.