ಅಧಿಕಾರಿಗಳಿಗೆ ಬೆಳೆ ಸಹಿತ ವಸ್ತುಸ್ಥಿತಿ ಮನವರಿಕೆ

CROP
Published on

ಲಕ್ಷ್ಮೇಶ್ವರ: ಬರ ಅಧ್ಯಯನ ತಂಡದ ಅಧಿಕಾರಿಗಳು ಗೊಜನೂರು ಗ್ರಾಮದಲ್ಲಿ ಹತ್ತಿ ಬೆಳೆ ಪರಿಶೀಲಿಸಿತು. ರೈತರ ಸಂಕಷ್ಟ ಹೇಳಿಕೊಂಡ ಚನ್ನಪ್ಪ ಷಣ್ಮುಖಿ, ಚಂದ್ರಶೇಖರ ಮಾಡಳ್ಳಿ, ರಾಜಕುಮಾರ ಕಿತ್ತಲಿ, ಲಕ್ಷ್ಮಣ ನಿಟ್ಟೂರ, ‘ಕಳೆದ ವರ್ಷ ಅತಿವೃಷ್ಟಿಯಿಂದ ಈ ವರ್ಷ ಬರಗಾಲದಿಂದ ರೈತ ಸಮುದಾಯ ತತ್ತರಿಸಿದೆ. ಹಿಂಗಾರಿನ ಬಿತ್ತನೆಗೂ ಮಳೆಯಿಲ್ಲ ಜಾನುವಾರುಗಳ ಬದುಕು ಕೂಡ ಕಷ್ಟವಾಗಿದೆ. ರೈತರ ಮಕ್ಕಳಿಗೆ ಕನ್ಯೆ ಕೊಡುತ್ತಿಲ್ಲ’ ಎಂದರು.

ಅಧಿಕಾರಿಗಳು ಪಟ್ಟಣದ ಇಟ್ಟಿಗೆರೆ ಕೆರೆ ಪರಿಶೀಲಿಸಿತು. ಈ ವರ್ಷ ತಾಲೂಕಿನ ಬಹುತೇಕ ಕೆರೆ, ಕೃಷಿ ಹೊಂಡ, ಹಳ್ಳಗಳು ಬತ್ತಿ ಹೋಗಿವೆ. ಕೆರೆ ಅಭಿವೃದ್ಧಿಪಡಿಸಿ ತುಂಗಭದ್ರ ನದಿಯಿಂದ ನೀರು ತುಂಬಿಸಬೇಕು ಎಂದು ರೈತರು ಮನವಿ ಮಾಡಿದರು.

ದೊಡ್ಡೂರ ರಸ್ತೆಯಲ್ಲಿನ ಚಂದ್ರಪ್ಪ ಹಂಜಗಿ ಅವರ ಶೇಂಗಾ ಹೊಲಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ರೈತರು ಬೆಳೆ ಸಮೇತ ವಸ್ತುಸ್ಥಿತಿ ವಿವರಿಸಿದರು. ಸಕಾಲಕ್ಕೆ ಮಳೆ ಬಾರದೆ ಶೇಂಗಾ ಬೆಳೆ ಹಾಳಾಗಿದೆ. ಬೆಳೆ ಹಸಿರಾಗಿ ಕಂಡರೂ ಕಾಯಿ ಕಟ್ಟಿಲ್ಲ ಎನ್ನುವುದನ್ನು ರೈತ ಬಸವರಾಜ ಬೆಂಡಿಗೇರಿ ಬೆಳೆ ಸಮೇತ ತೋರಿಸಿದರು. 3 ಎಕರೆ ಜಮೀನಿನಲ್ಲಿ ಕೇವಲ 2 ಚೀಲ ಶೇಂಗಾ ಬಂದಿದೆ. ಅವು ಕೂಡ ಜೊಳ್ಳಾಗಿರುವುದನ್ನು ಮೈಲಾರಪ್ಪ ಬ್ಯಾಡಗಿ ಇತರೆ ರೈತರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಸಿ.ಆರ್.ಮುಂಡರಗಿ, ತಾರಾಮಣಿ, ಶಶಿಕಾಂತ ಕೋಟಿಮನಿ, ಡಾ.ಹುಲಗನ್ನವರ, ಶ್ರೀನಿವಾಸ ಮೂರ್ತಿ, ಕೆ.ಆನಂದಶೀಶ, ಎಂ.ಎ. ಕಂಬಾಳಿಮಠ, ಶಿವಾನಂದ ಗೌಡರ, ಡಾ. ಹುಲಗಣ್ಣವರ, ಅಮಿತ ಬಿದರಿ, ಗಂಗಪ್ಪ ಎಂ., ಚಂದ್ರಶೇಖರ ನರಸಮ್ಮನವರ, ಸೋಮಣ್ಣ ಲಮಾಣಿ, ಐ.ಕೆ. ಹೊನ್ನಪ್ಪನವರ, ಸುರೇಶ ಕುಂಬಾರ, ಬಿ.ಎಂ.ಕಾತ್ರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net