

ಕಲಘಟಗಿ: ಬೆಳೆ ಹಾನಿ ಸಮೀಕ್ಷೆಯಲ್ಲಿ ಕಲಘಟಗಿ ತಾಲೂಕನ್ನು ಕೈಬಿಡಲಾಗಿದ್ದು, ಅದನ್ನು ಮರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪಟ್ಟಣದ ಯುವಶಕ್ತಿ ಸರ್ಕಲ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಬೇಡ್ತಿ ನದಿಯಿಂದ 107 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯ 179.50 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ತಂದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಅವರನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸನ್ಮಾನಿಸಲಾಯಿತು. ಮಂಜುನಾಥ ಮುರಳ್ಳಿ, ನರೇಶ ಮಲೆನಾಡು, ಪರಶುರಾಮ ಯತ್ತಿನಗುಡ್ಡ, ಉಳವಪ್ಪ ಬಳಿಗೇರ, ವಸಂತ ಡಾಖಪ್ಪನವರ, ಸಹದೇವಪ್ಪ ಕುಂಕೂರ, ಯಲ್ಲಪ್ಪ ತಳವಾರ, ಮಳ್ಳಪ್ಪ ಹೊನ್ನಿಹಳ್ಳಿ, ಶಿವಪ್ಪ ತಡಸ, ಬಸಯ್ಯ ಹಿರೇಮಠ ಇತರರಿದ್ದರು.