ಬಂಡಿದಾರಿ ಅಭಿವೃದ್ಧಿಪಡಿಸಲು ರೈತರ ಮನವಿ

KND FARMARS MANAVI
Published on

ಕುಂದಗೋಳ: ಪಟ್ಟಣದಿಂದ ಗುಡೇನಕಟ್ಟಿ ರಸ್ತೆ ಮೂಲಕ ಮುಳ್ಳೊಳ್ಳಿ ಗ್ರಾಮಕ್ಕೆ ತೆರಳುವ ಬಂಡಿದಾರಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ರಾಜು ಮಾವರಕರ ಅವರಿಗೆ ರೈತರು ಶನಿವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಕ್ಕಡಿ ದಾರಿ ಸರಿಪಡಿಸುವ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ರಸ್ತೆಯಲ್ಲಿ ಅಂದಾಜು 1800 ಎಕರೆಯಷ್ಟು ಪಟ್ಟಣದ ರೈತರ ಜಮೀನುಗಳಿದ್ದು, ರೈತರಿಗೆ ಭೂಮಿ, ಹದ ಮಾಡಲು, ಬೆಳೆ ಹಾಗೂ ಒಕ್ಕಲುತನದ ಸಲಕರಣೆ ತೆಗೆದುಕೊಂಡು ಹೋಗಿ ಬೇಸಾಯ ಮಾಡಲು ಆಗದೆ ತೊಂದರೆಯಾಗುತ್ತಿದೆ. ಅದೆಷ್ಟೋ ಜಮೀನುಗಳು ಪಡಾ ಬೀಳುವ ಪರಿಸ್ಥಿತಿ ನಿರ್ವಣವಾಗಿದೆ. ಹೀಗಾಗಿ ಸಂಬಂಧಿಸಿದ ಮೇಲಧಿಕಾರಿಗಳು ಗುಡೇನಕಟ್ಟಿಯಿಂದ ಮುಳ್ಳೊಳ್ಳಿ ಗ್ರಾಮಕ್ಕೆ ತೆರಳುವ ಬಂಡಿದಾರಿಯತ್ತ ಗಮನಹರಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಎದುರು ಎತ್ತು-ಚಕ್ಕಡಿ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪಪಂ ಸದಸ್ಯರಾದ ಗಣೇಶ ಕೋಕಾಟೆ, ರೈತರಾದ ಜಿ.ಕೆ. ಬಡ್ನಿ, ಆರ್.ಡಿ. ಕಳ್ಳಿಮನಿ, ವಿ.ಜಿ. ಬಡ್ನಿ, ಗಂಗಪ್ಪ ಶಿರೂರ, ರಾಮಪ್ಪ ಶಿಂಧೆ, ಎಚ್.ವೈ. ಕೂಡವಕ್ಕಲ, ವಿ.ಟಿ. ಕಲಾಲ, ಅಡಿವೆಪ್ಪ ಬಿಡ್ನಾಳ, ಎಂ.ಎಸ್. ಬೆಟದೂರ, ಎನ್.ಐ. ಬಿಳೇಬಾಳ, ಈಶ್ವರಪ್ಪ ನೆಲಗುಡ್ಡ , ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net