

ಚಿಕ್ಕಮಗಳೂರು: ಆಲ್ದೂರು ಹೋಬಳಿಯ ಗ್ರಾಮಗಳಲ್ಲಿ ವಿಪರೀತ ಕಾಡಾನೆಗಳ ಹಾವಳಿಯಿಂದ ನಿವಾಸಿಗಳು ಪ್ರಾಣ ಬೆದರಿಕೆಯಿಂದ ಓಡಾಡುವ ಸ್ಥಿತಿಯಿದೆ. ಕೂಡಲೇ ಆನೆಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಬುಧವಾರ ಡಿಎಫ್‌ಒ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಆಲ್ದೂರು ಹೋಬಳಿಯ ಇಳೇಖಾನ್, ಗುಡ್ಡದೂರು, ಕಟಾರದಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಜಮೀನುಗಳಲ್ಲಿ ಆನೆಗಳ ಗುಂಪು ಬೀಡುಬಿಟ್ಟಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ತ್ವರಿತಗತಿಯಲ್ಲಿ ಆನೆಗಳ ಸ್ಥಳಾಂತರಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ನೂರಾರು ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಧರಣಿ ನಡೆಸಲಿz್ದೆÃವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ವಸೀಂ ಜಮೀಲ್ ಇಳೆಖಾನ್, ಆಲ್ದೂರು, ಗುಡದೂರು, ಇಳೆಖಾನ್, ಕಟಾರದಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಐದು ತಿಂಗಳಿನಿAದ ಆನೆಗಳ ಹಾವಳಿ ಹೆಚ್ಚಾಗಿದೆ. ಹಗಲು ಹೊತ್ತು ತೋಟಕ್ಕೆ ಆನೆಗಳು ಬರಲಾರಂಭಿಸಿವೆ. ಮನೆಯ ಬಳಿಯ ಕಣದಲ್ಲೇ ಆನೆಗಳು ಕಾಣಿಸಿಕೊಳ್ಳಲಾರಂಭಿಸಿರುವುದರಿAದ ಮನೆಯಿಂದ ಹೊರಬರಲೇ ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಮಳೆಗಾಲದ ಅವಧಿಯಲ್ಲಿ ಮಂಜು ಮಸುಕಿದ ವಾತಾವರಣವಿರುವುದರಿಂದ ಆನೆಗಳು ನಮ್ಮ ಎದುರೇ ಇದ್ದರೂ ಕಾಣುತ್ತಿಲ್ಲ. ಹೀಗಾಗಿ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕಲಾರಂಭಿಸುತ್ತಿದ್ದಾರೆ. ಇದರಿಂದಾಗಿ ಬೆಳೆಗಾರರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಫಿ ಬೆಳೆಗಾರರ ಹೇಮಂತ್‌ಕುಮಾರ್ ಮಾತನಾಡಿ, ಕಳೆದ ಒಂದು ತಿಂಗಳಿನಿAದ ಮರ‍್ನಾಲ್ಕು ಕಾಡಾನೆಗಳು ಗ್ರಾಮಗಳ ಸುತ್ತಮುತ್ತಲು ಸಂಚರಿಸುತ್ತಿವೆ. ಅಲ್ಲದೇ ಕಾರ್ಮಿಕರ ಹಾಗೂ ಲೈನ್‌ಮನೆಗಳ ಸಮೀಪ ರಾತ್ರಿ ಸಮಯದಲ್ಲಿ ತಂಗುತ್ತಿರುವ ಕಾರಣ ಗ್ರಾಮಸ್ಥರು ಪ್ರಾಣಾಭಯದಿಂದ ಬದುಕುವಂತಾಗಿದೆ ಎಂದು ಹೇಳಿದರು.
ಕಾಡಾನೆಗಳ ದಾಳಿಯಿಂದ ಈ ಭಾಗದಲ್ಲಿ ಸುಮಾರು ೪೦ ಎಕರೆ ವಿಸ್ತೀರ್ಣದಲ್ಲಿ ಕಾಫಿ, ಮೆಣಸು, ಅಡಕೆ ಹಾಗೂ ಬಾಳೆ ತೋಟಗಳು ನಾಶಗೊಂಡಿವೆ. ರಾತ್ರಿ ೯ರಿಂದ ವಿದ್ಯುತ್ ಕಡಿತಗೊಳಿಸುವ ಮೆಸ್ಕಾಂ ಇಲಾಖೆ ಬೆಳಗಿನ ಜಾವ ೯ ಗಂಟೆಗೆ ನೀಡುತ್ತಿದೆ. ಇದರಿಂದ ರಾತ್ರಿ ಸಮಯದಲ್ಲಿ ಸಂಚರಿಸಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಗಳಲ್ಲಿ ಕಾಡಾನೆ ಸೇರಿದಂತೆ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾರ್ಮಿಕರು, ನಿವಾಸಿಗಳು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ, ಮೆಸ್ಕಾಂ ಇಲಾಖೆ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಾಫಿ ಬೆಳೆಗಾರರ ಮನವಿ ಆಲಿಸಿ ಮಾತನಾಡಿದ ಡಿಎಫ್‌ಒ ರಮೇಶ್ ಬಾಬು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇಳೆಖಾನ್ ನಲ್ಲಿ ಒಂದು ಕ್ಯಾಂಪ್ ಸೆಟ್‌ಅಪ್ ಮಾಡುತ್ತೇವೆ. ೯೦ ಕಿಲೊಮೀಟರ್ ಎಲೆಕ್ಟಿçಕಲ್ ಫೆನ್ಸ್ ಅಳವಡಿಸುತ್ತೇವೆ. ಬೆಳೆನಾಶ ಸರ್ವೆ ನಡೆಸಿ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬೆಳೆಗಾರರಾದ ಮಹೇಶ್ ಕುಮಾರ್, ಡಾ. ಖಾಲಿದ್ ಸಲೀಂ, ನಿಶಾಂತ್, ರತನ್, ಮುಕ್ತಿಯಾರ್ ಸಾಬ್, ರಾಜೇಶ್, ಅಜ್ಗರ್ ಸಾಬ್, ಕ್ರಾಂತಿಲಾಲ್ ಸೇರಿದಂತೆ ೫೦ಕ್ಕೂ ಹೆಚ್ಚು ಬೆಳೆಗಾರರು ಇದ್ದರು.