ತೊಗರಿ ಬೆಳೆ ಹಾನಿ, ಮಧ್ಯಂತರ ಪರಿಹಾರಕ್ಕಾಗಿ ರೈತರ ಮನವಿ

AKRS MANVI M B PATIL
ವಿಜಯಪುರ ನಗರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಉಮೇಶ ವಾಲೀಕಾರ, ಬಾಲಪ್ಪಗೌಡ ಲಿಂಗದಳ್ಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ತೊಗರಿ ಬೆಳೆ ಹಾನಿಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು, ಕೂಡಲೇ ಮಧ್ಯಂತರ ಪರಿಹಾರ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲಗೆ ಮನವಿ ಸಲ್ಲಿಸಿದರು.

ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಹವಾಮಾನದ ವೈಪರಿತ್ಯ ಹಾಗೂ ಜಿಆರ್‌ಜಿ 152 ಹಾಗೂ ಜಿಆರ್‌ಜಿ 811 ತಳಿಯ ಕಳಪೆ ಬಿತ್ತನೆ ಬೀಜದಿಂದಾಗಿ ಶೇ. 90 ರಷ್ಟು ತೊಗರಿ ಬೆಳೆ ಹಾಳಾಗಿದೆ. ಈ ಕುರಿತು ಹಲವು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಮಧ್ಯಂತರ ಪರಿಹಾರ ಹಣ ಬಿಡುಗಡೆ ಗೊಳಿಸಿಲ್ಲ. ಈಗಾಗಲೇ ಕಲಬುರಗಿ ಜಿಲ್ಲೆಯ ರೈತರಿಗೆ ಮಧ್ಯಂತರ ಪರಿಹಾರ ಬಂದಿದೆ. ಹೀಗಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೂ ಪರಿಹಾರ ಕಲ್ಪಿಸಿ ಎಂದರು.

ಇನ್ನು ಹೂವಿನ ಹಿಪ್ಪರಗಿ ಹೋಬಳಿ ವ್ಯಾಪ್ತಿಗೆ ಬರುವ 10 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಇದೆ. ಹೀಗಾಗಿ ಸಂಕನಾಳ ಶಾಖಾ ಕಾಲುವೆಯಿಂದ ಅಂದಾಜು 2 ಕಿಲೋ ಮೀಟರ್ ವರೆಗೆ ವಿತರಣೆ ಕಾಲುವೆ ನಿರ್ಮಿಸಿ ಕಾಲುವೆಗೆ ನೀರು ಹರಿಸಿ ಸುತ್ತ ಮುತ್ತಲಿನ ಹಳ್ಳಿಗಳಾದ ಕಾನ್ನಾಳ, ಅಗಸಬಾಳ, ಸಂಕನಾಳ, ಸೋಲವಾಡಗಿ, ಕಣಕಾಲ ಸೇರಿದಂತೆ ಒಟ್ಟು 8 ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಬಾಲಪ್ಪಗೌಡ ಲಿಂಗದಳ್ಳಿ, ಮಾರುತಿ ಹೂಗಾರ, ಪರಶುರಾಮ ಮುತ್ತಣ್ಣ, ಶಿವಪ್ಪ ವಾಲೀಕಾರ, ಹಣಮಂತ ಕಲಬುರಗಿ, ಶಿವಶರಣ ನಾಗಶೆಟ್ಟಿ, ಬಸವರಾಜ ನಾಗರೆಡ್ಡಿ, ಸೋಮೇಶ ನಾಗರೆಡ್ಡಿ, ಬಸವರಾಜ ನಾಟೀಕಾರ, ಆನಂದ ನಾಗರೆಡ್ಡಿ, ಸಿದ್ಲಿಂಗಪ್ಪ ನಾಗರೆಡ್ಡಿ, ಮಡಿವಾಳಪ್ಪ ನಾಗರೆಡ್ಡಿ, ಸಾಹೇಬಗೌಡ ಹೊಸೂರ, ಯಮನಪ್ಪ ಸರೂರ, ಹೊನ್ನಪ್ಪ ನಾಟೀಕಾರ, ಗುರುಲಿಂಗಯ್ಯ ಹಳ್ಳಿಮಠ, ಜೀವಯ್ಯ ತೆಗ್ಗಿನಮಠ, ಹಣಮಂತ ಹಡಪದ, ಬಸವರಾಜ ಹಡಪದ, ಅಶೋಕ ಹಡಪದ, ಮಲ್ಲು ಭಜಂತ್ರಿ, ಸಂಗಮೇಶ ಮೇಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net