ಕಾಂಗ್ರೆಸ್ಸಿನಿಂದ ರೈತರಿಗೆ ನೆಮ್ಮದಿ

CTD 18 RAGUMURTY-04
Published on

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರೈತರು ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ತುರುವನೂರು ಹೋಬಳಿ ಹುಣಸೇಕಟ್ಟೆ ಗ್ರಾಮದಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಹುಣಸೇಕಟ್ಟೆ ನನ್ನ ತವರು ಮನೆ ಇದ್ದಂತೆ. ಈ ಗ್ರಾಮದ 30ಕ್ಕೂ ಹೆಚ್ಚು ರೈತಮುಖಂಡರು ಪಕ್ಷಕ್ಕೆ ಸೇರಿರುವುದು ಉತ್ತಮ ಬೆಳವಣಿಗೆ ಎಂದರು. ನಮ್ಮ ಪಕ್ಷದ ಮುಖಂಡರು ಮತ್ತು ಕಾರ‌್ಯಕರ್ತರು ಸ್ವಾಭಿಮಾನಿಗಳು. ಅವರು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಕೆಲ ಪಕ್ಷದ ನಾಯಕರಿಗೆ ಚುನಾವಣೆ ಸಂದರ್ಭ ಮಾತ್ರ ಜನರು ನೆನಪಾಗುತ್ತಾರೆ ಎಂದು ಹೇಳಿದರು.

ರೈತ ಮುಖಂಡ ಮಾರುತಿ, ಕಾಂತರಾಜ್ ಮಾತನಾಡಿದರು. ಮುಖಂಡರಾದ ಉಮೇಶ್, ಓಬಣ್ಣ, ಜಯಪ್ಪ, ರಾಘವೇಂದ್ರ, ಏಕಣ್ಣ, ಶಾಂತಪ್ಪ, ತಿಪ್ಪೇಸ್ವಾಮಿ, ಮೂರ್ತಿ, ಮಹಾಂತೇಶ್, ವೆಂಕಟೇಶ್, ಮಂಜುನಾಥ್, ಸುರೇಶ್, ಮಹಾಂತಣ್ಣ, ಸಂತೋಷ್, ಮಹಾಂತಪ್ಪ, ತಿಪ್ಪೇಸ್ವಾಮಿ, ಬ್ಲಾಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net