

ಹೂವಿನಹಡಗಲಿ: ಈರುಳ್ಳಿ ಬೆಲೆ ಭಾರಿ ಕುಸಿತ ಕಂಡಿರುವುದರಿಂದ ತಾಲೂಕಿನ ತಳಕಲ್ಲು ಗ್ರಾಮದ ರೈತ, ನಿವೃತ್ತ ಸೈನಿಕ ರಮೇಶ್ ಕಡಬಗೇರಿ ಅವರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಶುಕ್ರವಾರ ನಾಶ ಮಾಡಿದರು.
ಈರುಳ್ಳಿ ಮಾರಾಟದಿಂದ ಬರುವ ಹಣ ಕೂಲಿಕಾರ್ಮಿಕರಿಗೆ ಕೊಡಲು ಸಾಕಾಗುವುದಿಲ್ಲ. ಈಗಾಲೇ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ನಾನು ನಿವೃತ್ತಿ ಬಳಿಕ ಕೃಷಿಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಬೆಂಗಳೂರು ಮಾರುಕಟ್ಟೆಯಲ್ಲಿ ದೊಡ್ಡಗಾತ್ರದ ಈರುಳ್ಳಿ ಕ್ವಿಂಟಲ್‌ಗೆ 1200 ರೂ. ಇದೆ. ಲಾಭದ ನಿರೀಕ್ಷೆಯಲ್ಲಿದ್ದೆ. ಆದರೆ, ನಷ್ಟ ಉಂಟಾಗಿದ್ದು, ಅನಿವಾರ್ಯವಾಗಿ ನಾಶ ಪಡಿಸುತ್ತಿದ್ದೇನೆ ಎಂದು ತಿಳಿಸಿದರು.