ಮೈಕ್ರೋ ೈನಾನ್ಸ್ ಕಿರುಕುಳಕ್ಕೆ ರೈತ ಬಲಿ

SND 7-1 ATMHATYA
ಬಸನಗೌಡ ಬಿರಾದಾರ
Published on

ಸಿಂದಗಿ: ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ರೈತ ಬಸನಗೌಡ ಹಣಮಂತ್ರಾಯ ಬಿರಾದಾರ(50) ಮೈಕ್ರೋ ೈನಾನ್ಸ್ ಕಿರುಕುಳಕ್ಕೆ ಬಲಿಯಾಗಿದ್ದಾರೆ.

ರೈತ ಬಸನಗೌಡ ಅವರು ವಿವಿಧ ೈನಾನ್ಸ್‌ಗಳಲ್ಲಿ ಸಾಲ ಮಾಡಿದ್ದರು. ೈನಾನ್ಸ್‌ನವರ ಕಿರುಕುಳ ತಾಳದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಮಹಾದೇವಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಯಿ ಬೌರಮ್ಮ ಬಿರಾದಾರ ಹಾಗೂ ಪತ್ನಿ ಮಹಾದೇವಿ ಬಿರಾದಾರ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ, ಬಸನಗೌಡ ತೊಗರಿಗೆ ಸಿಂಪಡಿಸುವ ಎಣ್ಣೆ ಸೇವಿಸಿ ಒದ್ದಾಡುತ್ತಿದ್ದರು.ಕಲಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ತಾಯಿ ಹೆಸರಿನ ಜಮೀನಿನ ಮೇಲೆ ಏಳು ೈನಾನ್ಸ್ ಹಾಗೂ ಒಂದು ಸ್ವಹಾಯ ಸಂಘದಿಂದ 7ಲಕ್ಷ 35 ಸಾವಿರ ರೂ. ಸಾಲ ಪಡೆದಿದ್ದರು. ಸಾಲ ನೀಡಿದ್ದ ೈನಾನ್ಸ್ ಅಧಿಕಾರಿ ಮತ್ತು ಸಿಬ್ಬಂದಿ ಬಸನಗೌಡರ ಮನೆಗೆ ಬಂದು ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net