ನಿಯಮಬದ್ಧವಾಗಿ ಸರ್ವೇ ನಡೆಸಿಲ್ಲವೆಂದು ಸತ್ಯಾಗ್ರಹ

IMG-20240805-WA0105
Published on

ಪಾಂಡವಪುರ: ಜಮೀನು ಹದ್ದಬಸ್ತಿನ ಅಳತೆಯಲ್ಲಿ ಲೋಪ ಎಸಗಿದ್ದು, ನಿಯಮದಂತೆ ಅಳತೆ ಮಾಡಿಲ್ಲ ಎಂದು ಆರೋಪಿಸಿ ತಾಲೂಕಿನ ಹಿರೇಮರಳಿ ಗ್ರಾಮದ ರೈತ ವೇಣುಗೋಪಾಲ ಕಣ್ಣು ಮತ್ತು ಬಾಯಿಗೆ ಬಟ್ಟೆ ಕಟ್ಟಿಕೊಂಡು ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಚಿಟ್ಟನಾಯಕನಹಳ್ಳಿ ಗ್ರಾಮದ 33/4 ರ ಸರ್ವೇ ನಂಬರ್‌ನಲ್ಲಿ 2019ರಲ್ಲಿ ಭೂ ದಾಖಲೆ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಟಿ.ಆರ್.ಭಾಸ್ಕರ್ ಅವರು ನಿಯಮದಂತೆ ಸರ್ವೇ ಕೆಲಸ ಮಾಡದೆ ಲೋಪವೆಸಗಿದ್ದಾರೆ. ಈ ಬಗ್ಗೆ ಅಂದಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಜತೆಗೆ ಇದಕ್ಕಾಗಿ ಸಾಕಷ್ಟ ಹಣ ಖರ್ಚಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಅನ್ಯಾಯವನ್ನು ಪ್ರಶ್ನೆ ಮಾಡಿದಕ್ಕೆ ನನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡುವುದಾಗಿ ಭೂಮಾಪಕ ಭಾಸ್ಕರ್ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.

ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಪ್ರತಿಭಟನಾಕಾರನ ಸಮಸ್ಯೆ ಆಲಿಸಿ ಕಾನೂನು ರೀತಿ ಜಮೀನನ್ನು ಮರು ಸರ್ವೇ ಮಾಡಲು ಶಾಸಕರ ಮೂಲಕ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net