ಬರಗಾಲದಿಂದ ಬೆಳೆ ನಷ್ಟ: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

suicide
Published on

ಕೆ.ಎಂ.ದೊಡ್ಡಿ: ಸಮೀಪದ ಸಬ್ಬನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಮಂಚೇಗೌಡ ಅವರ ಮಗ ಎಸ್.ಎಂ.ಮಹೇಶ(48) ಮೃತ ದುರ್ದೈವಿ. ಎರಡು ಎಕರೆ ಜಮೀನು ಹೊಂದಿದ್ದ ಇವರು, ಸಾಲ ಮಾಡಿ ವ್ಯವಸಾಯ ಮಾಡುತ್ತಿದ್ದರು. ಬರಗಾಲದ ಕಾರಣ ಹಾಕಿದ ಬೆಳೆ ಕೈಗೆ ಸಿಗದೆ ನಷ್ಟ ಉಂಟಾಗಿತ್ತು. ಇತ್ತ ಸಾಲಗಾರರ ಕಿರುಕುಳ ಒಂದು ಕಡೆ, ಬೆಳೆ ಇಲ್ಲದೆ ಕಂಗಾಲಾದ ಮಹೇಶ ಶನಿವಾರ ತಮ್ಮ ಜಮೀನಿನ ಬಳಿ ವಿಷ ಸೇವಿಸಿದ್ದರು. ಸ್ಥಳೀಯರನ್ನು ಗಮನಿಸಿದ ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಮಹೇಶ ಅವರ ಸಹೋದರ ಸುರೇಶ್ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net