

ನರಗುಂದ: ಸಾಲಭಾದೆ ತಾಳದೆ ಪಟ್ಟಣದ ಸೋಮಾಪೂರ ಬಡಾವಣೆಯ ಈಶ್ವರಪ್ಪ ಅಮಾತೆಪ್ಪ ಕಾಲವಾಡ (50) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತ ಕೃಷಿ ಚಟುವಟಿಕೆಗಾಗಿ ನವಲಗುಂದದ ಗ್ರಾಮೀಣ ಕೂಟದ ಸಂಘದಲ್ಲಿ 1.50 ಲಕ್ಷ ರೂ, ನರಗುಂದದ ಖಾಸಗಿ ಫೈನಾನ್ಸ್‌ನಲ್ಲಿ 80 ಸಾವಿರ ರೂ, ಸ್ವ ಸಹಾಯ ಸಂಘದಲ್ಲಿ 2 ಲಕ್ಷ ರೂ, ಎಸ್.ಕೆ. ಫೈನಾನ್ಸ್ ನಲ್ಲಿ 1 ಲಕ್ಷ ರೂ. ಸೇರಿ 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ. ಮಳೆಯಿಲ್ಲದೆ ಪ್ರಸಕ್ತ ಮುಂಗಾರು ಹಂಗಾಮಿನ ವಿವಿಧ ಬೆಳೆಗಳು ಸರಿಯಾಗಿ ಬಾರದಿದ್ದರಿಂದ ಸಾಲ ಮರು ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ತಮ್ಮ ಹಳೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಮೃತನ ಪತ್ನಿ ಕಸ್ತೂರೆವ್ವ ಕಾಲವಾಡ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.