ಸಾಲ ಬಾಧೆಗೆ ರೈತ ಆತ್ಮಹತ್ಯೆ

Farmer Death byadgi
Published on

ಬ್ಯಾಡಗಿ: ಸಾಲ ಬಾಧೆಯಿಂದ ಮನನೊಂದು ತಾಲೂಕಿನ ಬನ್ನಿಹಟ್ಟಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ವೀರನಗೌಡ್ರ ನಾಗಪ್ಪ ಕೋಟಿಹಾಳ (37) ಆತ್ಮಹತ್ಯೆ ಮಾಡಿಕೊಂಡ ರೈತ. ಅವರಿಗೆ 2 ಎಕರೆ ಜಮೀನಿದ್ದು, ಕೆವಿಜಿ ಬ್ಯಾಂಕ್​ನಲ್ಲಿ 1 ಲಕ್ಷ ರೂ. ಹಾಗೂ ವಿವಿಧ ಸಂಘ- ಸಂಸ್ಥೆಗಳಲ್ಲಿ 1.5 ಲಕ್ಷ ರೂ. ಸಾಲ ಹೊಂದಿದ್ದರು. ಎರಡ್ಮೂರು ವರ್ಷಗಳಿಂದ ಬೆಳೆ ಸಮರ್ಪಕವಾಗಿ ಬಂದಿರಲಿಲ್ಲ. ಹೀಗಾಗಿ ಸಾಲ ಮರುಪಾವತಿಸಲಾಗದೇ ಮನನೊಂದು ಭಾನುವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net