

ಚಿಂಚೋಳಿ (ಕಲಬುರಗಿ): ತಾಲೂಕಿನ ನರನಾಳ ಗ್ರಾಮದ ರೈತ ನಾಗಪ್ಪ ತಂದೆ ಹಣಮಂತ (40) ಎನ್ನುವವರು ಸಾಲಬಾಧೆ ತಾಳದೆ ತನ್ನ ಜಮೀನಿನಲ್ಲಿ ಕಿಟನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆತ್ಮಹತ್ಯೆ ಶರಣಾದ ಘಟನೆ ಜರುಗಿದೆ.
ರೈತ ನಾಗಪ್ಪ ವಿವಿಧ ಮೈಕ್ರೋ ಫೈನಾನ್ಸ್, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧೆಡೆ ಸುಮಾರು 2 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು, ಮೈಕ್ರೋ ಫೈನಾನ್ಸ್ ರಿಕವರಿ ಏಜೆಂಟರ ಕಿರುಕುಳ ತಾಳದೆ ಬುಧವಾರದಂದು ಹೊಲದಲ್ಲಿ ಕಿಟನಾಶಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಲಬುರ್ಗಿಯ ಜಯದೇವ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ರೈತ ಸಂಘ ಆಕ್ರೋಶ : ಮೃತ ರೈತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಕುಟುಂಬ ಬೀದಿಗೆ ಬಿದ್ದಿದೆ. ಇದಕ್ಕೆ ಖಾಸಗಿ ಹಣಕಾಸು ಸಂಸ್ಥೆಗಳು ನೇರ ಹೊಣೆ ಆದ್ದರಿಂದ ಸರ್ಕಾರವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ರೈತನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮ್ಮಶೇಟ್ಟಿ ಒತ್ತಾಯಿಸಿದ್ದಾರೆ.