ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ರೈತ, ಕಾಲು ಜಾರಿ ಬಾವಿಗೇ ಬಿದ್ದು ಸಾವು!

Well
ದುರಂತ ಸಂಭವಿಸಿದ್ದ ಸ್ಥಳ
Published on

ಶಿವಮೊಗ್ಗ: ಸಾವು ಎಲ್ಲಿ ಹೇಗೆ ಯಾವ ರೀತಿಯಲ್ಲಿ ಬಂದೆರಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಇದೀಗ ಈ ಪ್ರಕರಣ ಇನ್ನೊಂದು ಉದಾಹರಣೆ ಎಂದರೂ ತಪ್ಪೇನಲ್ಲ. ಇಲ್ಲೊಬ್ಬರ ರೈತ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದು, ಜೀವಂತವಾಗಿ ಮರಳದಂಥ ಘಟನೆ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ದೊಡ್ಡಬಿಳಗೋಡು ಗ್ರಾಮದ ಜಿ.ಕೆ. ಗಣಪತಿ (75) ಎಂಬವರು ಸಾವಿಗೀಡಾದ ರೈತ.

ಇಂದು ಇವರು ಕೃಷಿ ಕೆಲಸಕ್ಕಾಗಿ ಜಮೀನಿಗೆ ಹೋದಾಗ ಜಾರಿ ಬಿದ್ದಿದ್ದಾರೆ. ಕಾಲು ಜಾರಿದವರು ಭಾರಿ ಮಳೆಯಿಂದಾಗಿ ನೀರು ತುಂಬಿದ್ದ ಬಾವಿಗೇ ಬಿದ್ದಿದ್ದಾರೆ. ಆದರೆ ಬಾವಿ ನೀರು ತುಂಬಿದ್ದರಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net