ರೈತರಿಗೆ ಸಮರ್ಪಕ ಗೊಬ್ಬರ ಒದಗಿಸಿ

0108-SDP-SHARANAPPA 1
ಕಾರಟಗಿಯಲ್ಲಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡ ನಾಗರಾಜ ಬಿಲ್ಗರ್ ಮಾತನಾಡಿದರು. ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಕಾರಟಗಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್, ಮುಖಂಡರಾದ ನಾಗರಾಜ ಬಿಲ್ಗರ್, ಗುರುಸಿದ್ದಪ್ಪ ಯರಕಲ್, ವಿರೇಶ್ ಸಾಲೋಣಿ, ಗಿರೇಗೌಡ ಇದ್ದರು.
Published on

ಸಿದ್ದಾಪುರ: ರಸಗೊಬ್ಬರ ಪೂರೈಕೆಯಲ್ಲಿ ಎಡವಿರುವ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಮಂಡಲ ಶುಕ್ರವಾರ ಕರೆಕೊಟ್ಟಿದ್ದ ಕಾರಟಗಿ ಬಂದ್ ಸಂಪೂರ್ಣ ವಿಫಲವಾಯಿತು. ಪಟ್ಟಣದ ಎಪಿಎಂಸಿಯಿಂದ ಕನಕದಾಸ ವೃತ್ತದವರೆಗೆ ಎತ್ತಿನ ಬಂಡಿ ಮೆರವಣಿಗೆ ಮಾಡುವ ಮೂಲಕ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟರೆ ಬಂದ್‌ಗೆ ಸಂಪೂರ್ಣ ಬೆಂಬಲ ದೊರೆಯಲಿಲ್ಲ.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಮಾತನಾಡಿ, ಕೇಂದ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡಿದೆ. ಆದರೆ, ಅದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅವೈಜ್ಞಾನಿಕವಾಗಿ ರಾಜ್ಯದಲ್ಲಿ ಗೊಬ್ಬರ ಸಂಗ್ರಹಣೆ ಮಾಡಿರುವ ಕಾರಣ ಬಡ ಹಾಗೂ ಮಧ್ಯಮ ರೈತರಿಗೆ ಗೊಬ್ಬರ ದೊರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈ ವಿಚಾರ ಗಂಭೀರವಾಗಿ ಪರಿಗಣಿಸಬೇಕು.

ರಾಜ್ಯದಲ್ಲಿಯೇ ಗೊಬ್ಬರ ಪಡೆಯಲು ರೈತ ಮಣ್ಣು ತಿಂದ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ವರ್ಗಾವಣೆ ವಿಚಾರದಲ್ಲಿ ಅಧಿಕಾರಿಗಳು ಬೀದಿ ಪಾಲಾಗಿದ್ದಾರೆ. ಸಚಿವರ ಮನೆ ಮುಂದೆಯೇ ಈ ವಿಚಾರವಾಗಿ ಪ್ರತಿಭಟನೆ ನಡೆದಿದೆ. ತುಂಗಭದ್ರಾ ಜಲಾಶಯ ಕ್ರಸ್ಟ್‌ಗೇಟ್ ಬದಲಾವಣೆ ಮಾಡುವಂತೆ ಈ ಹಿಂದೆಯೇ ಅಧಿಕಾರಿಗಳು ವರದಿ ನೀಡಿದ್ದರು. ಆದರೆ, ಸರ್ಕಾರ ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ.

ಈಗ 80ಟಿಎಂಸಿ ನೀರು ಸಂಗ್ರಹಣೆ ಸಾಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅನ್ನದಾತರ ಅಳಲು ಯಾರೂ ಕೇಳುವವರು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರಟಗಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್, ಮುಖಂಡರಾದ ನಾಗರಾಜ ಬಿಲ್ಗರ್,

ಗುರುಸಿದ್ದಪ್ಪ ಯರಕಲ್, ವೀರೇಶ್ ಸಾಲೋಣಿ, ಗಿರೇಗೌಡರ್, ದುರ್ಗಾರಾವ್, ಅಮರೇಶ್ ಕುಳಗಿ, ಶಿವಶರಣೆ ಗೌಡ, ಅಮರೇಶಪ್ಪ ಹುಲ್ಕಿಹಾಳ್, ಬಸವರಾಜ್, ರವಿ ಸಿಂಗ್, ಚಂದ್ರಶೇಖರ್ ಗೌಡ, ಚಂದ್ರೇಗೌಡ, ಚಂದ್ರಶೇಖರ್ ಮುಸಾಲಿ, ಬಸವರಾಜ ಎತ್ತಿನಮನಿ, ಉಮೇಶ್ ಭಂಗಿ, ಶಿವು ಅರಕೇರಿ, ಬರಗೂರು ಮರಿಸ್ವಾಮಿ, ಜಿ. ತಿಮ್ಮನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net