ಯತ್ನಾಳ ಒಡೆತನದ ಸಿದ್ಧಸಿರಿ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ, ಸಿಎಂಗೆ ಭೇಟಿ

oppo_0
oppo_0
Published on

ಕಲಬುರಗಿ: ಯತ್ನಾಳ ಒಡೆತನದ ಸಿದ್ಧಸಿರಿ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ರೈತರ ಪ್ರತಿಭಟನೆ, ಸಿಎಂಗೆ ಭೇಟಿ ಶಾಸಕ ಬಸನಗೌಡ ಯತ್ನಾಳ ಒಡೆತನದ ಸಿದ್ಧರಿಸಿ ಎಥೆನಾಲ್ ಕಾರ್ಖಾನೆಯನ್ನು ಆರಂಭಿಸಲು ಆಗ್ರಹಿಸಿ, ಕಾರ್ಖಾನೆ ವ್ಯಾಪ್ತಿಯ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.

ನಗರದ ಸಾರ್ವಜನಿಕ ಉದ್ಯಾನದಲ್ಲಿ ಸೇರಿದ ಸಾವಿರಾರು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲು ರೈತರ ನಿಯೋಗ ಮುಂದಾದಾಗ ಅಧಿಕಾರಿಗಳು ಮನವರಿಕೆ ಮಾಡಿ, ಮುಖಂಡರ ನಿಯೋಗವನ್ನು ಸಿಎಂ ಭೇಟಿಗೆ ಕರೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net