ರೈತ ಸಂಘಟನೆಗಳಿಂದ ಬ್ಯಾಂಕ್‌ಗೆ ಮುತ್ತಿಗೆ

26GKK2-Web
ಗೋಕಾಕ ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗಣಪತಿ ಈಳೀಗೇರ, ಭೀಮಶಿ ಗದಾಡಿ, ಭೀಮಶಿ ಹುಲಕುಂದ, ಮುತ್ತೇಪ್ಪ ಬಾಗಣ್ಣವರ ಇತರರು ಇದ್ದರು.
Published on

ಗೋಕಾಕ: ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯ ಸಂಚಾಲಕ ಗಣಪತಿ ಈಳೀಗೇರ ಮಾತನಾಡಿ, ಗೋಕಾಕ ಕೆವಿಜಿ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಅವರು ರೈತರಿಗೆ ಸಾಲದ ಮರುಪಾವತಿಗೆ ಕಿರುಕುಳ ನೀಡುತ್ತ ಬಂದಿದ್ದು, ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದರು. ಇದರ ಬಗ್ಗೆ ಮೇಲಧಿಕಾರಿಗಳು ತಕ್ಷಣವೇ ಮ್ಯಾನೇಜರ್ ಅವರನ್ನು ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು. ನಂತರ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಮಾತನಾಡಿ, ರೈತರ ಸಾಲವನ್ನು ಬಡ್ಡಿದರ ಕಡಿಮೆ ಮಾಡಿ ತುಂಬಿಕೊಳ್ಳುತ್ತೇನೆ. ರೈತರಿಗೆ ಗೌರವ ಕೊಡುತ್ತೇನೆ ಎಂದು ಹೇಳಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ, ರೈತ ಸಂಘದ ಪದಾಧಿಕಾರಿಗಳಾದ ಭೀಮಶಿ ಹುಲಕುಂದ, ಮುತ್ತೆಪ್ಪ ಬಾಗಣ್ಣವರ, ಪ್ರಕಾಶ ಹಾಲಣ್ಣವರ, ಕುಮಾರ ತಿಗಡಿ, ಶಂಕರ ಮದಿಹಳ್ಳಿ, ರಾಯಪ್ಪ ಗೌಡಪ್ಪನವರ, ಲಕ್ಷ್ಮಣ ದಾಸಣ್ಣವರ, ಶಿವಪ್ಪ ಹೊಸಮನಿ, ನಿಂಗಪ್ಪ ಗೌಡರ, ಸಿದ್ದಪ್ಪ ತಪಸಿ, ಲಕ್ಕಪ್ಪ ಬಾಗಣ್ಣವರ, ರಮೇಶ ಬೂದಿಗೊಪ್ಪ, ಮುತ್ತೆಪ್ಪ ಹುಲಕುಂದ, ಶ್ರೀಶೈಲ ಅಂಗಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net