ರೈತರ ಬೇಡಿಕೆಗಳಿಗೆ ಸ್ಪಂದಿಸಿ

farmer organisation koppal memorandum MP Rajashekhar Hitnala
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಟನೆ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಕಚೇರಿ ನೌಕರನಿಗೆ ಮನವಿ ಸಲ್ಲಿಸಿದರು. ಹೋರಾಟಗಾರರಾದ ಸುಂಕಪ್ಪ ಗದಗ, ಖಾಸಿಂ ಸರ್ದಾರ, ಬಸವರಾಜ ಶೀಲವಂತರ, ಬಸವರಾಜ ನರೇಗಲ್​, ಪಾಮಣ್ಣ, ಹುಸೇನಪ್ಪ ಕೆ.ಇದ್ದರು.
Published on

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಟನೆ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಸಂಸದ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ರೈತ, ಕಾರ್ಮಿಕ ವಿರೋಧಿ ಧೋರಣೆಗಳು ಹೇರಲ್ಪಡುತ್ತಿವೆ. ಬೆಲೆ ಏರಿಕೆಯಾಗುತ್ತಿದೆ. ರೈತ ವಿರೋಧಿ ಕಾನೂನು ಜಾರಿ ಮಾಡಲಾಗುತ್ತಿದೆ. ಜನಾಂಗಿಯ ದ್ವೇಷ, ಕೋಮು ಸಂರ್ಷ ಹೆಚ್ಚುತ್ತಿವೆ. ಬೆಂಬಲ ಬೆಲೆ ದೊರೆಯುತ್ತಿಲ್ಲ. ರೈತ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರದ ದುರಾಡಳಿತದಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

ಬೆಂಬಲ ಬೆಲೆ ಯೋಜನೆ ಜಾರಿಯಾಗಬೇಕು. ರೈತ, ಕಾರ್ಮಿಕ ವಿರೋಧಿ ಕಾನೂನುಗಳು ರದ್ದಾಗಬೇಕು. ರೈತರ ಸಾಲ ಮನ್ನಾ ಮಾಡಬೇಕು. ಕೃಷಿ ಚಟುವಟಿಕೆಗಳ ಮೇಲೆ ಜಿಎಸ್​ಟಿ ತೆರವಾಗಬೇಕು. ರೈತರು, ಕೃಷಿ ಕಾರ್ಮಿಕರಿಗೆ ಮಾಸಾಶನ ಯೋಜನೆ ಜಾರಿ ಮಾಡಬೇಕು. ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಬೇಕು. ಬಿಎನ್​ಎಸ್​ ಕಾಯ್ದೆ ವಾಪಸ್​ ಪಡೆಯಬೇಕು. ಪ್ರತ್ಯೇಕ ಕೃಷಿ ಬಜೆಟ್​ ಮಂಡಿಸಬೇಕು. ನಮ್ಮೆಲ್ಲ ಹಕ್ಕುಗಳ ಬಗ್ಗೆ ಸದನದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಬೇಕೆಂದು ಆಗ್ರಹಿಸಿದರು.

ಹೋರಾಟಗಾರರಾದ ಸುಂಕಪ್ಪ ಗದಗ, ಖಾಸಿಂ ಸರ್ದಾರ, ಬಸವರಾಜ ಶೀಲವಂತರ, ಬಸವರಾಜ ನರೇಗಲ್​, ಪಾಮಣ್ಣ, ಹುಸೇನಪ್ಪ ಕೆ., ಮರಿನಾಗಪ್ಪ ಡಗ್ಗಿ, ರಾಮಣ್ಣ, ಶ್ರೀನಿವಾಸ ಹೊಸಳ್ಳಿ, ಸಿದ್ದಲಿಂಗಪ್ಪ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net