

ಡಂಬಳ: ಸಾಲಬಾಧೆ ತಾಳಲಾರದೆ ಮತ್ತು ಶಿಂಗಟಾಲೂರ ಏತ ನೀರಾವರಿ ಕಾಲುವೆಗೆ ಕಳೆದುಕೊಂಡ ಜಮೀನಿನ ಪರಿಹಾರ ಹಣವೂ ದೊರಕದೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಂಬಳ ಹೋಬಳಿ ವ್ಯಾಪ್ತಿಯ ಬರದೂರ ಗ್ರಾಮದಲ್ಲಿ ನಡೆದಿದೆ.
ಲಕ್ಷೇಶ್ವರ ತಾಲೂಕಿನ ಗೊಜನೂರ ಹಾಲಿವಸ್ತಿ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ಮಂಜಪ್ಪ ತಂದೆ ಈಶ್ವರಪ್ಪ ಹೆಬಸೂರ (47)ಆತ್ಮಹತ್ಯೆಗೆ ಶರಣಾದ ರೈತ. ಸಮರ್ಪಕ ಮಳೆ, ಬೆಳೆ ಬಾರದೆ ಬ್ಯಾಂಕ್ಗಳಲ್ಲಿ ಮಾಡಿದ ಸಾಲ ತೀರಿಸುವುದು ಹೇಗೆ?, ಮತ್ತು ಕೆಲ ವರ್ಷಗಳ ಹಿಂದೆ ಶಿಂಗಟಾಲೂರ ಏತ ನೀರಾವರಿ ಕಾಲುವೆಗೆ ಜಮಿನು ಕಳೆದುಕೊಂಡು ಪರಿಹಾರ ಹಣಕ್ಕಾಗಿ ಹಲವು ಸಲ ಕಚೇರಿಗೆ ಅಲೆದಾಡಿದರೂ ಪರಿಹಾರ ಹಣ ದೊರೆಯದ್ದರಿಂದ ಮನನೊಂದು ಗುರುವಾರ ನೇಣು ಹಾಕಿಕೊಂಡಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.