ಕೃಷಿಕರಿಗೆ ಹೊಸ ಸಾಲ ನೀಡಲು ಸೂಚಿಸಿ: ರೈತ ಸಂಘಟನೆಯಿಂದ ಒತ್ತಾಯ

050520 Raichur Farmer Organation Appeal
Published on

ರಾಯಚೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ನಗರದ ಡಿಸಿ ಕಚೇರಿಯಲ್ಲಿ ಎಡಿಸಿ ದುರಗೇಶಗೆ ಮಂಗಳವಾರ ಮನವಿ ಸಲ್ಲಿಸಿತು.

ಫಸಲ್ ಬಿಮಾದಿಂದ ರೈತರ ಖಾತೆಗೆ ಹಣ ಜಮಾ ಮಾಡಬೇಕು, ಬ್ಯಾಂಕ್‌ಗಳಲ್ಲಿ ಹೊಸ ಸಾಲ ವಿತರಣೆಗೆ ಸೂಚಿಸಬೇಕು, ಪ್ರತಿ ಎಕರೆ ತರಕಾರಿಗೆ 20 ಸಾವಿರ ರೂ., ತೋಟಗಾರಿಕೆ ರೈತರಿಗೆ ಹೆಕ್ಟೇರ್‌ಗೆ 1 ಲಕ್ಷ ರೂ. ನಷ್ಟ ಪರಿಹಾರ ನೀಡಬೇಕು. ಪ್ರತಿ ಕ್ವಿಂಟಾಲ್ ಈರುಳ್ಳಿಗೆ 2500 ರೂ. ದರ ನಿಗದಿ ಪಡಿಸಬೇಕು, ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೀಜ, ರಸಗೊಬ್ಬರದ ದಾಸ್ತಾನು ಅರಂಭಿಸಬೇಕು, ಎಡ, ಬಲ ದಂಡೆ ಕಾಲುವೆಗಳ ಹೂಳೆತ್ತುವ ಜತೆಗೆ ಎಲ್ಲ ಕೆರೆಗಳ ಭರ್ತಿಗೆ ಕ್ರಮ ವಹಿಸಬೇಕು. ಕೆಳ ಭಾಗದ ರೈತರ ಹಿತ ಕಾಪಾಡಲು ಯೋಜನೆ ರೂಪಿಸಬೇಕು, ಗಣೇಕಲ್ ಜಲಾಶಯದ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಮುಖಂಡರಾದ ಕೆ.ವೀರೇಶಗೌಡ, ವೆಂಕಟರಾವ್, ಮುದ್ದಣ್ಣ, ಜಯಪ್ಪ ಸ್ವಾಮಿ, ಹುಲಿಗೆಪ್ಪ ಜಾಲಿಬೆಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net