ರೈತರು,ವರ್ತಕರ ನಡುವೆ ಮಾತಿನ ಚಕಮಕಿ

web 2
Published on

ಬಣಕಲ್: ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ಬಣಕಲ್, ಕೊಟ್ಟಿಗೆಹಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲ ಅಂಗಡಿ ಮುಚ್ಚಿ ಬಂದ್​ಗೆ ಬೆಂಬಲ ಸೂಚಿಸಿದರು. ಹೋಟೆಲ್, ಪೆಟ್ರೋಲ್ ಬಂಕ್ ಸೇರಿ ಬಹುತೇಕ ಅಂಗಡಿಗಳು ತೆರೆದಿದ್ದವು. ಖಾಸಗಿ ಬಸ್ ಸಂಚಾರ ಇರಲಿಲ್ಲ.

ಕೊಟ್ಟಿಗೆಹಾರದಲ್ಲಿ ರೈತ ಸಂಘಟನೆಗಳು ಅಂಗಡಿ ಮುಂಗಟ್ಟು ಮುಚ್ಚುವಂತೆ ವರ್ತಕರಿಗೆ ಸೂಚಿಸಿದಾಗ ರೈತ ಸಂಘಟನೆ ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು. ರೈತ ವಿರೋಧಿ ಕಾಯ್ದೆ ರೈತರಿಗೆ ಮಾತ್ರ ಸಂಬಂಧಿಸಿಲ್ಲ. ರೈತರು ಬೆಳೆದರೆ ಮಾತ್ರ ವರ್ತಕರಿಗೆ ಉದ್ಯೋಗ. ಅಂಗಡಿ ಮುಂಗಟ್ಟು ಮುಚ್ಚುವಂತೆ ಮನವಿ ಮಾಡಿದರು. ಆಗ ಕೆಲವರು ಅಂಗಡಿಗಳನ್ನು ಮುಚ್ಚಿದರು.

ರೈತ ಸಂಘದ ಪುಟ್ಟಸ್ವಾಮಿಗೌಡ, ಮಂಜುನಾಥ್, ವನಶ್ರೀ ಲಕ್ಷ್ಮಣ ಗೌಡ, ನಾಗೇಶ್, ಗಣೇಶ್, ಪ್ರಜ್ವಲಾ, ಶಕುಂತಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net