ಜಿಲ್ಲೆಯ ರೈತ ಮುಖಂಡರ ಸಭೆ; ಸಿಎಂ- ರೈತರ ಸಭೆ ನಡೆಸಲು ಸಮಯ ನಿಗದಿಗೆ ರೈತ ಮುಖಂಡರ ಮನವಿ

21 Dwd 5
Published on

ಧಾರವಾಡ: ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ, ಮಹದಾಯಿ ಯೋಜನೆ ಅನುಷ್ಠಾನ ಕುರಿತು ಜಿಲ್ಲೆಯ ರೈತ ಮುಖಂಡರು ಹಾಗೂ ಮಹದಾಯಿ ಹೋರಾಟಗಾರರ ಸಭೆ ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಮಹದಾಯಿ ನೀರಾವರಿ ಯೋಜನೆ ಅನುಷ್ಠಾನ, ನಿರಂತರ ವಿದ್ಯುತ್ ಪೂರೈಕೆ, ಬೆಳೆವಿಮೆ ಪರಿಹಾರ, ಮಧ್ಯಂತರ ಬೆಳೆ ವಿಮೆ ಪರಿಹಾರ, ಅತಿವೃಷ್ಟಿಯಲ್ಲಿನ ಮನೆ ಹಾನಿ ಪರಿಹಾರ ಬಿಡುಗಡೆ, ಬ್ಯಾಂಕ್‌ಗಳಿAದ ಒಟಿಎಸ್ ತೊಂದರೆ, ಅಣ್ಣಿಗೇರಿಯ ಗ್ರಾಮ ಚಾವಡಿ, ಜಿಲ್ಲೆಯ ಕೆರೆಗಳಿಗೆ ಕಾಳಿನದಿ ನೀರು ಪೂರೈಕೆೆ, ಪಹಣಿ ಪತ್ರಿಕೆಯಲ್ಲಿನ ವಿಷಯಗಳ ಅಪ್‌ಡೇಟ್, ನಮ್ಮ ಹೊಲ- ನಮ್ಮ ದಾರಿ ಯೋಜನೆ ಜಾರಿ, ಕುಂದಗೋಳ ಭಾಗದ ರೈತರ ಜಮಿನುಗಳಲ್ಲಿ ಚಿಗರಿ ಹಾವಳಿ ತಡೆ ಮತ್ತು ಮಹದಾಯಿ ಹಾಗೂ ಉತ್ತರ ಕರ್ನಾಟಕದ ಕೃಷಿ, ನೀರಾವರಿ, ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಲು ಸಮಯಾವಕಾಶ ನೀಡಲು ರೈತ ಮುಖಂಡರು ಮನವಿ ಮಾಡಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮಹದಾಯಿ ಯೋಜನೆ ಜಾರಿಗೆ ಒಬ್ಬ ರೈತನಾಗಿ, ಹೋರಾಟಗಾರನಾಗಿ ಬದ್ಧನಾಗಿದ್ದೇನೆ. ಪ್ರಸಕ್ತ ಬಜೆಟ್‌ದಲ್ಲಿ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಕೇಂದ್ರ ಸಚಿವರು ಹಾಗೂ ಧಾರವಾಡ ಸಂಸದರೊAದಿಗೆ ರೈತರ ಸಭೆ ಜರುಗಿಸಿ ಕೇಂದ್ರದ ಸಹಕಾರದೊಂದಿಗೆ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸೋಣ ಎಂದರು.
ಜಿಲ್ಲೆಯ ರೈತರಿಗೆ ಮಧ್ಯಂತರ ಬೆಳೆ ಪರಿಹಾರವಾಗಿ ಈಗಾಗಲೇ ಸುಮಾರು ೭೦ ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಕೇಂದ್ರದಿAದ ಸುಮಾರು ೧೭ ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದಕ್ಕೆ ರಾಜ್ಯದ ಪಾಲು ಸೇರಿಸಿ, ರೈತರಿಗೆ ಪರಿಹಾರ ಹಣ ನೀಡಲಾಗುವುದು ಎಂದರು.
ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಈಗಾಗಲೇ ೫೦ಕ್ಕೂ ಹೆಚ್ಚು ರೈತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಮಹದಾಯಿ ಹಾಗೂ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊAದಿಗೆ ರೈತರ ಸಭೆ ನಡೆಸಲು ಸಮಯ ನಿಗದಿಪಡಿಸಲು ಪ್ರಯತ್ನಿಸುತ್ತೇನೆ. ನವಲಗುಂದದ ಕಾರ್ಯಕ್ರಮದಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿಸಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ಸ್ಥಳ ಗುರುತಿಸಬೇಕು ಎಂದು ಜಿಲ್ಲಾ ಪೊಲೀಸ್ ಅಽÃಕ್ಷಕರಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ಪೊಲೀಸ್ ಅಽÃಕ್ಷಕ ಡಾ. ಗೋಪಾಲ ಬ್ಯಾಕೋಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ವೇದಿಕೆಯಲ್ಲಿದ್ದರು.
ರೈತ ಮುಖಂಡರಾದ ಶಂಕರ ಅಂಬಲಿ, ಲೋಕನಾಥ ಹೆಬಸೂರ, ಶಿವಣ್ಣ ಹೆಬ್ಬಳ್ಳಿ, ವೀರೇಶ ಸೊಬರದಮಠ, ಭಗವಂತಪ್ಪ ಪಟ್ಟಣದ, ಗೋಪಾಲ ದಿವಟೆ, ರಮೇಶ ಕೊರವಿ, ಬಸವರಾಜ ಜೋಗಪ್ಪನವರ, ಹಣಮಂತ ಬೂದಿಹಾಳ, ಮಲ್ಲಿಕಾರ್ಜುನ ಬಾಳನಗೌಡರ, ಸುಭಾಷಚಂದ್ರಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net